ADVERTISEMENT

ಹುಬ್ಬಳ್ಳಿ: ಹೆಣ್ಣಿನ ಮೇಲಿನ ದೌರ್ಜನ್ಯ ನಿಲ್ಲಬೇಕು: ಆರ್‌ಜೆ ಅಂಕಿತಾ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 16:26 IST
Last Updated 26 ಮಾರ್ಚ್ 2023, 16:26 IST
ಹುಬ್ಬಳ್ಳಿಯ ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆಯ ಹುಬ್ಬಳ್ಳಿ ಶಾಖೆಯಲ್ಲಿ ಇತ್ತೀಚೆಗೆ ಮಹಿಳಾ ದಿನಾಚರಣೆ ಕಾರ್ಯಕ್ರಮ  ಜರುಗಿತು. ಸಂಸ್ಥೆ ಅಧ್ಯಕ್ಷೆ ಮಲ್ಲಿಕಾರ್ಜುನ್ ಪಿಸೆ, ಕಾರ್ಯದರ್ಶಿ ಧನರಾಜ ಮುನ್ನೋಳ್ಳಿ, ಆರ್‌ಜೆ ಅಂಕಿತಾ ಇದ್ದಾರೆ
ಹುಬ್ಬಳ್ಳಿಯ ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆಯ ಹುಬ್ಬಳ್ಳಿ ಶಾಖೆಯಲ್ಲಿ ಇತ್ತೀಚೆಗೆ ಮಹಿಳಾ ದಿನಾಚರಣೆ ಕಾರ್ಯಕ್ರಮ  ಜರುಗಿತು. ಸಂಸ್ಥೆ ಅಧ್ಯಕ್ಷೆ ಮಲ್ಲಿಕಾರ್ಜುನ್ ಪಿಸೆ, ಕಾರ್ಯದರ್ಶಿ ಧನರಾಜ ಮುನ್ನೋಳ್ಳಿ, ಆರ್‌ಜೆ ಅಂಕಿತಾ ಇದ್ದಾರೆ   

ಹುಬ್ಬಳ್ಳಿ: ‘ಸಮಾಜ ಹೆಣ್ಣನ್ನು ಗೌರವದಿಂದ ಕಾಣಬೇಕು. ಲಿಂಗದ ಕಾರಣಕ್ಕಾಗಿ ಆಕೆ ಮೇಲೆ ನಡೆಯುವ ಅತ್ಯಾಚಾರ, ಹಿಂಸೆ ಸೇರಿದಂತೆ ಎಲ್ಲಾ ದೌರ್ಜನ್ಯಗಳನ್ನು ನಿಲ್ಲಿಸಬೇಕು’ ಎಂದು ಆರ್‌ಜೆ ಅಂಕಿತಾ ಹೇಳಿದರು.

ನಗರದ ಕುಸುಗಲ್ ರಸ್ತೆಯಲ್ಲಿರುವ ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆಯ ಹುಬ್ಬಳ್ಳಿ ಶಾಖೆಯಲ್ಲಿ ಇತ್ತೀಚೆಗೆ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹೆಣ್ಣು ಕೇವಲ ಮನೆ ಮತ್ತು ಮಕ್ಕಳ ಪಾಲನೆಗೆ ಸೀಮಿತವಾಗದೆ ಎಲ್ಲಾ ಕ್ಷೇತ್ರಗಳಲ್ಲಿ ಭಾಗವಹಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ತನ್ನ ಸ್ವಾಭಿಮಾನ, ಸ್ಥಾನಮಾನ ಹಾಗೂ ಹಕ್ಕುಗಳಿಗಾಗಿ ನಿರಂತರ ಹೋರಾಟ ಮಾಡಬೇಕು’ ಎಂದರು.

ADVERTISEMENT

ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ್ ಪಿಸೆ ಸ್ವಾಗತಿಸಿದರು. ಪ್ರೇಕ್ಷಾ ಜೈನ್ ಹಾಗೂ ಅಕ್ಷತಾ ಹುನಗುಂದ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಮಾಡಿದರು. ಸಂಸ್ಥೆಯ ಕಾರ್ಯದರ್ಶಿ ಧನಪಾಲ್ ಮುನ್ನೋಳ್ಳಿ, ಪದಾಧಿಕಾರಿಗಳು, ಸದಸ್ಯರು ಹಾಗೂ ಲೆಕ್ಕ ಪರಿಶೋಧಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.