
ಪ್ರಜಾವಾಣಿ ವಾರ್ತೆ
ಕಂಪ್ಲಿ: ಸ್ಥಳೀಯ ರುದ್ರಮ್ಮ ಎಸ್.ಎಂ. ರುದ್ರಯ್ಯಸ್ವಾಮಿ ಇಂಗ್ಲಿಷ್ ಮಾಧ್ಯಮ ಶಾಲೆಯ 3ನೇ ತರಗತಿ ವಿದ್ಯಾರ್ಥಿ ಮಹ್ಮದ್ ಅತಿಕ್ ಮನೆ ಪಾಠ ಮಾಡಿಲ್ಲ ಎಂದು ಮೊಣಕಾಲು ಹಿಂಬದಿಗೆ ಬಾಸುಂಡೆ ಬರುವಂತೆ ಶಿಕ್ಷಕಿ ಅಕ್ಕಮಹಾದೇವಿ ಎಂಬುವವರು ಥಳಿಸಿರುವುದಾಗಿ ಬುಧವಾರ ಪೋಷಕರು ಆರೋಪಿಸಿದ್ದಾರೆ.
ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡಿದೆ.
‘ವಿದ್ಯಾರ್ಥಿಗೆ ಶಿಕ್ಷಕಿಯೊಬ್ಬರು ಬಾಸುಂಡೆ ಬರುವಂತೆ ಥಳಿಸಿರುವ ವಿಚಾರ ಬುಧವಾರ ಶಾಲೆಯ ಅವಧಿಯ ನಂತರ ತಿಳಿದು ಬಂದಿದೆ. ಶಾಲೆಗೆ ತೆರಳಿ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಶಿಕ್ಷಣ ಇಲಾಖೆ ಇಸಿಒ ಎಂ. ರೇವಣ್ಣ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.