ತೆಕ್ಕಲಕೋಟೆ: ‘ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಪಟ್ಟಣದ ಪ್ರಾಗೈತಿಹಾಸಿಕ ಮತ್ತು ಪ್ರಾಚೀನ ಸ್ಮಾರಕ ಹಾಗೂ ಪುರಾತತ್ವ ಸ್ಥಳಗಳ ಉತ್ಖನನಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ’ ಎಂದು ಹಂಪಿ, ಕಮಲಾಪುರದ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಉಪನಿರ್ದೇಶಕ ಡಾ. ಆರ್. ಶೇಜೇಶ್ವರ ತಿಳಿಸಿದರು.
‘ತೆಕ್ಕಲಕೋಟೆಯ ಬಳೇ ತೋಟದ ಬಳಿ, ಗೌಡರ ಮೂಲೆ ಮತ್ತು ಹಿರೇಹರ್ಲ ಬಳಿ ಉತ್ಖನನ ನಡೆಸಲು ಸ್ಥಳ ಗುರುತಿಸಲಾಗಿದೆ. ಒಟ್ಟು ಐವರು ತಜ್ಞರ ನೇತೃತ್ವದಲ್ಲಿ ಉತ್ಖನನ ಮತ್ತು ಅಧ್ಯಯನ ನಡೆಯಲಿದೆ’ ಎಂದು ಅವರು ತಿಳಿಸಿದರು.
ಉತ್ಖನನ ತಂಡದ ಸಹನಿರ್ದೇಶಕಿ, ಅಮೆರಿಕದ ಹಾಟ್ವಿಕ್ ವಿಶ್ವವಿದ್ಯಾಲಯದ ಪ್ರೊ. ನಮಿತಾ ಎಸ್ ಸುಗಂಧಿ ಮಾತನಾಡಿ, ‘ಪ್ರಾಗೈತಿಹಾಸಿಕ ಕಾಲದ ಅಧ್ಯಯನದ ದೃಷ್ಟಿಯಿಂದ ಈ ಉತ್ಪನನ ಅಗತ್ಯವಾಗಿದೆ. 2015ರಲ್ಲಿ ಒಮ್ಮೆ ಉತ್ಖನನ ನಡೆದಿತ್ತು’ ಎಂದರು.
ಉತ್ಪನನ ತಂಡದಲ್ಲಿ ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯದ ಪ್ರೊ. ವಿನಾಯಕ, ಅಶೋಕ ವಿಶ್ವವಿದ್ಯಾಲಯದ ಆಕಾಶ್ ಶ್ರೀನಿವಾಸ, ಮೊಹಾಲಿಯ ಮಿಹಿರ್ ತಂಗಸಾಲಿ, ವೈಷಿ ರಾಯ್, ದೆಹಲಿಯ ಸಹಾಯಕ ಜಿಲ್ಲಾಧಿಕಾರಿ ದೇವೇಂದ್ರ ಸಿಂಗ್ ಚೌಧರಿ, ಸಂಶೋಧನಾರ್ಥಿ ಅಶೋಕ್ ಅಬಕಾರಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.