
ಪ್ರಜಾವಾಣಿ ವಾರ್ತೆ
ತೆಕ್ಕಲಕೋಟೆ: ಸಮೀಪದ ಕರೂರು ಗ್ರಾಮದ ಲಕ್ಷೀನಾರಾಯಣಸ್ವಾಮಿ ಜಾತ್ರೋತ್ಸವ ಗುರುವಾರ ವಿಜ್ರಂಭಣೆಯಿಂದ ಜರುಗಿತು.
ಜಾತ್ರೆಯ ಅಂಗವಾಗಿ ಬೆಳಿಗ್ಗೆ ದೇವರ ಚಿತ್ರಪಟ ಹಾಗೂ ಗಂಗೆಸ್ಥಳಪೂಜೆ ಮೆರವಣಿಗೆ ನಡೆಯಿತು.
ಸ್ವಾಮಿಗೆ ಅಭಿಷೇಕ, ಪೂಜೆ ನೆರವೇರಿಸಿ ಬೆಳ್ಳಿ ಆಭರಣ ಮತ್ತು ಹೂಗಳಿಂದ ವಿಶೇಷವಾಗಿ ಅಲಂಕರಿಸಿ ಮಹಾಮಂಗಳಾರತಿ ನಡೆಸಲಾಯಿತು. ಸಂಜೆ ದೇವಸ್ಥಾನದ ರಥ ಬೀದಿಯಿಂದ ಬಸವೇಶ್ವರ ದೇವಸ್ಥಾನದವರೆಗೆ ರಥವು ಸಾಗಿತು. ಭಕ್ತರು ಓಣು ಉತ್ತುತ್ತಿ ಮತ್ತು ಹೂ ಎಸೆದು ಭಕ್ತಿ ಸಮರ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.