ADVERTISEMENT

18ರಂದು ರಂಗನಾಥಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 17 ಮೇ 2019, 13:29 IST
Last Updated 17 ಮೇ 2019, 13:29 IST
ರಥೋತ್ಸವದ ಪ್ರಯುಕ್ತ ಹೊಸಪೇಟೆಯ ವಡಕರಾಯ ಸ್ವಾಮಿ ದೇವಸ್ಥಾನವನ್ನು ತಳಿರು ತೋರಣಗಳಿಂದ ಅಲಂಕರಿಸಿರುವುದು
ರಥೋತ್ಸವದ ಪ್ರಯುಕ್ತ ಹೊಸಪೇಟೆಯ ವಡಕರಾಯ ಸ್ವಾಮಿ ದೇವಸ್ಥಾನವನ್ನು ತಳಿರು ತೋರಣಗಳಿಂದ ಅಲಂಕರಿಸಿರುವುದು   

ಹೊಸಪೇಟೆ: ಇಲ್ಲಿನ ವಡಕರಾಯ ಸ್ವಾಮಿ ದೇವಾಲಯದ ರಂಗನಾಥಸ್ವಾಮಿ ರಥೋತ್ಸವ ಮೇ 18ರಂದು ಸಂಜೆ 4ಕ್ಕೆ ನಡೆಯಲಿದೆ.

ಬೆಳಿಗ್ಗೆ ಸ್ವಾಮಿಗೆ ಐದು ವಿಧದ ಹಣ್ಣುಗಳ ಪಂಚಾಮೃತ ಅಭಿಷೇಕ, ವಾಯುಸ್ಥಿತಿ ಪಠಣ ಮಾಡಿ ನೈವೇದ್ಯ ಸಮರ್ಪಿಸಲಾಗುವುದು. ಹತ್ತು ಗಂಟೆಗೆ ಹೋಮ ಜರುಗಲಿದೆ. ಬಳಿಕ ಬ್ರಹ್ಮ ರಥೋತ್ಸವ ನಡೆಯಲಿದೆ. ಸಂಜೆ ನಾಲ್ಕಕ್ಕೆ ಸ್ವಾಮಿ ಧ್ವಜ ಹರಾಜು ಪ್ರಕ್ರಿಯೆ ನಡೆಯುವುದು. ಬಳಿಕ ರಥೋತ್ಸವ ಜರುಗುವುದು.

ಪ್ರತಿ ವರ್ಷದಂತೆ ಈ ವರ್ಷವೂ ತೇರಿಗೆ ಸನ್ನಿ ಹಾಕುವ ಜವಾಬ್ದಾರಿಯನ್ನು ಚಿತ್ರಕೇರಿ ನಾಯಕ ಸಮುದಾಯ ಮತ್ತು ಕಬ್ಬೇರು ಕೇರಿಯ ಗಂಗಾಮತ ಸಮಾಜದವರಿಗೆ ನೀಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.