ADVERTISEMENT

ತ್ರಿವಳಿ ಕೊಲೆ ಪ್ರಕರಣ: ಕೊಟ್ಟೂರು ಠಾಣೆಗೆ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 2:22 IST
Last Updated 7 ಫೆಬ್ರುವರಿ 2026, 2:22 IST
   

ಕೊಟ್ಟೂರು (ವಿಜಯನಗರ ಜಿಲ್ಲೆ): ‘ಇತ್ತೀಚಿಗೆ ಪಟ್ಟಣದಲ್ಲಿ ನಡೆದಿದ್ದ, ತ್ರಿವಳಿ ಕೊಲೆ ಪ್ರಕರಣ ಬೆಂಗಳೂರಿನ ತಿಲಕ್ ನಗರ ಠಾಣೆಯಿಂದ ಕೊಟ್ಟೂರು ಠಾಣೆಗೆ ಶುಕ್ರವಾರ ವರ್ಗಾವಣೆಯಾಗಿದ್ದು, ತನಿಖಾಧಿಕಾರಿಯಾಗಿ ಸಿಪಿಐ ಡಿ.ದುರುಗಪ್ಪ ಅವರನ್ನು ನೇಮಕ ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ತಿಳಿಸಿದ್ದಾರೆ.

ಕಳೆದ ಜನವರಿ 26 ರಂದು ನಡೆದ ಘಟನೆಯ ನಂತರ ತಿಲಕ್ ನಗರದ ಪೊಲೀಸ್ ಠಾಣೆಯಲ್ಲಿ ಆರೋಪಿ ಬಿ.ಜೆ.ಅಕ್ಷಯ್ ತನ್ನ ತಂದೆ, ತಾಯಿ ಹಾಗೂ ತಂಗಿ ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದಾರೆ ಎಂದು ನೀಡಿದ ದೂರಿನನ್ವಯ ತನಿಖಾ ಕೈಗೊಳ್ಳಲಾಗಿತ್ತು. ಮೂವರನ್ನು ಕೊಲೆ ಮಾಡಿ, ಕೊಟ್ಟೂರಿನ ಮನೆಯಲ್ಲಿ ಹೂತು ಹಾಕಿರುವುದು ಬೆಳಕಿಗೆ ಬಂದಿತ್ತು.

‘ತಂಗಿ ಬಿ.ಜೆ.ಅಮೃತಾ ಬೇರೆ ಯಾರನ್ನೋ ಪ್ರೀತಿಸುತ್ತಿದ್ದು, ಆಕೆ ಗರ್ಭಿಣಿಯಾಗಿರುವುದನ್ನು ಅಕ್ಷಯ್ ವಿರೋಧಿಸಿದ್ದ. ತಂದೆ ಎಚ್.ಭೀಮರಾಜ್ , ತಾಯಿ ಜಯಲಕ್ಷ್ಮಿ ಹಾಗೂ ತಂಗಿಯನ್ನು ಕೊಲೆ ಮಾಡಿ ತನ್ನ ಮನೆಯಲ್ಲಿ ಹೂತು ಹಾಕಿರುವುದಾಗಿ, ಮೊತ್ತೊಬ್ಬ ಆರೋಪಿ ವಸಂತ ಕುಮಾರಗೆ ತಿಳಿಸಿದ್ದ. ಇಬ್ಬರೂ ಜೊತೆಗೂಡಿ ಸಾಕ್ಷಿ ನಾಶ ಪಡಿಸಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.