ಕಂಪ್ಲಿ: ಇಲ್ಲಿಯ ಕೋಟೆ ಪ್ರದೇಶದ ಬಳಿಯ ತುಂಗಭದ್ರಾ ನದಿಗೆ ಜಲಾಶಯದಿಂದ ಸುಮಾರು 1,05,000 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ವಿವಿಧೆಡೆ ಜಲಾವೃತ, ಜನಜೀವನ ಅಸ್ತವ್ಯಸ್ತ, ಕಂಪ್ಲಿ-ಗಂಗಾವತಿ ಸಂಪರ್ಕ ಕಡಿತ ಮುಂದುವರಿದಿದೆ.
ನದಿ ಭರ್ತಿಯಾಗಿ ಹರಿಯುತ್ತಿರುವುದರಿಂದ ನದಿ ಪಾತ್ರದ ತಗ್ಗು ಪ್ರದೇಶದ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬೆಳೆದಿರುವ ಬಾಳೆ, ಕಬ್ಬಿನ ಗದ್ದೆಗಳಿಗೆ ನೀರು ನುಗ್ಗಿದೆ. ಕೋಟೆ ಬನವಾಸಿ ರಸ್ತೆಗೆ ನದಿ ನೀರು ನುಗ್ಗಿರುವುದರಿಂದ ಹೊಲ, ಗದ್ದೆಗಳಿಗೆ ನೀರಿನಲ್ಲಿಯೇ ನಡೆದುಕೊಂಡು ಹೋಗುವಂಥ ಪರಿಸ್ಥಿತಿ ರೈತರಿಗೆ ಎದುರಾಗಿದೆ. ಕೋಟೆ ಗಂಗಮ್ಮನ ಕಟ್ಟೆ, ನದಿ ದಂಡೆ ಪಕ್ಕದ ರುದ್ರಭೂಮಿಗೆ ತೆರಳುವ ರಸ್ತೆಯಲ್ಲಿ ಪ್ರವಾಹದ ನೀರು ಸಂಗ್ರಹವಾಗಿದೆ. ಕೋಟೆ ಮಾಧವ ತೀರ್ಥರ ವೃಂದಾವನ ಜಲಾವೃತವಾಗಿದೆ.
ಕಂಪ್ಲಿ-ಸಿರುಗುಪ್ಪ ಹೆದ್ದಾರಿಯ ಸಣಾಪುರ-ಇಟಗಿ ಗ್ರಾಮ ಸಂಪರ್ಕದ ನಾರಿಹಳ್ಳ ಸೇತುವೆಗೆ ನದಿ ಹಿನ್ನೀರು ನುಗ್ಗಿರುವುದರಿಂದ ಸಂಚಾರದಲ್ಲಿ ವ್ಯತ್ಯಯವಾಗಿ ಜನರಿಗೆ ತೊಂದರೆಯಾಗಿದೆ. ಸೇತುವೆ ಬಳಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಅಲ್ಲದೆ, ಹೊಸ ಬಸ್ ನಿಲ್ದಾಣದ ಬಳಿ ಚೆಕ್ ಪೋಸ್ಟ್ ತೆರೆದಿದ್ದು, ಸೇತುವೆ ಕಡೆ ವಾಹನ ಸಂಚರಿಸದಂತೆ ತೀವ್ರ ನಿಗಾವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.