ADVERTISEMENT

ಮತ್ತಷ್ಟು ತಗ್ಗಿದ ತುಂಗಭದ್ರಾ ಒಳಹರಿವು

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 11:30 IST
Last Updated 13 ಜುಲೈ 2020, 11:30 IST
ತುಂಗಭದ್ರಾ ನದಿಗೆ ನೀರು ಹರಿದು ಬರುತ್ತಿದೆ.
ತುಂಗಭದ್ರಾ ನದಿಗೆ ನೀರು ಹರಿದು ಬರುತ್ತಿದೆ.   

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ಸೋಮವಾರ ಮತ್ತಷ್ಟು ತಗ್ಗಿದೆ. ಸೋಮವಾರ 17,550 ಕ್ಯುಸೆಕ್‌ ಒಳಹರಿವು ದಾಖಲಾಗಿದೆ. ಭಾನುವಾರ 24,497 ಕ್ಯುಸೆಕ್‌ ಒಳಹರಿವು ದಾಖಲಾಗಿತ್ತು.

ಜು.7ರಿಂದ ಸತತವಾಗಿ ಒಳಹರಿವು ಹೆಚ್ಚಾಗುತ್ತಲೇ ಇತ್ತು. ಜಲಾನಯನ ಪ್ರದೇಶದಲ್ಲಿ ಮಳೆ ತಗ್ಗಿರುವುದರಿಂದ ಭಾನುವಾರದಿಂದ ಒಳಹರಿವು ಇಳಿಮುಖಗೊಂಡಿದೆ.

1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಸದ್ಯ 1,601.68 ಅಡಿ ನೀರಿನ ಸಂಗ್ರಹವಿದೆ. 305 ಕ್ಯುಸೆಕ್‌ ಹೊರಹರಿವು ಇದೆ. ಶನಿವಾರ 34,374 ಕ್ಯುಸೆಕ್‌ ಒಳಹರಿವು, ಶುಕ್ರವಾರ 26,007 ಕ್ಯುಸೆಕ್‌, ಗುರುವಾರ 16,211 ಕ್ಯುಸೆಕ್‌, ಬುಧವಾರ 7,321 ಕ್ಯುಸೆಕ್‌ ಹಾಗೂ ಮಂಗಳವಾರ 2,532 ಕ್ಯುಸೆಕ್‌ ಒಳಹರಿವು ದಾಖಲಾಗಿತ್ತು.

ADVERTISEMENT

‘ಜಲಾನಯನ ಪ್ರದೇಶದಲ್ಲಿ ಮಳೆ ತಗ್ಗಿದೆ. ಸಹಜವಾಗಿಯೇ ಒಳಹರಿವು ಇಳಿಮುಖಗೊಂಡಿದೆ’ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.