
ಪ್ರಜಾವಾಣಿ ವಾರ್ತೆ
ಬಳ್ಳಾರಿ: ಅಪ್ರಾಪ್ತ ವಯಸ್ಕನಾಗಿದ್ದ ಮಗನಿಗೆ ಬೈಕ್ ಕೊಟ್ಟು, ಚಾಲನೆಗೆ ಅನುವು ಮಾಡಿಕೊಟ್ಟ ತಂದೆಗೆ ಬಳ್ಳಾರಿಯ 3ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಮಂಗಳವಾರ ₹25 ಸಾವಿರ ದಂಡ ವಿಧಿಸಿದೆ.
ಬಳ್ಳಾರಿಯ ಸಂಚಾರ ಠಾಣೆಯಲ್ಲಿ 2023ರಲ್ಲಿ ಈ ಪ್ರಕರಣ ದಾಖಲಾಗಿತ್ತು. ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನ ನೀಡಿ, ಚಾಲನೆಗೆ ಅವಕಾಶ ಮಾಡಿಕೊಟ್ಟಿದ್ದಾಗಿ ಮಂಗನಹಳ್ಳಿ ನಿವಾಸಿ ನಿಂಗರಾಜು ತಪ್ಪೊಪ್ಪಿಕೊಂಡಿದ್ದರು. ಇದರ ಆಧಾರದಲ್ಲಿ ನ್ಯಾಯಾಧೀಶ ಮುದುಕಪ್ಪ ಓದನ್ ದಂಡ ವಿಧಿಸಿ ಆದೇಶಿಸಿದ್ದಾರೆ.
ಸಹಾಯಕ ಸರ್ಕಾರಿ ಅಭಿಯೋಜಕ ಮುರ್ತುಜಾ ಸಾಬ ಸರ್ಕಾರದ ಪರ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.