ADVERTISEMENT

ಉರುಸ್ : ಕುಸ್ತಿ ಪಂದ್ಯಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2025, 16:12 IST
Last Updated 21 ಮಾರ್ಚ್ 2025, 16:12 IST
ಹೂವಿನಹಡಗಲಿಯ ತಾಲ್ಲೂಕಿನ ಕ್ರೀಡಾಂಗಣದಲ್ಲಿ ಉರುಸ್ ಅಂಗವಾಗಿ ಕುಸ್ತಿ ನಡೆಯಿತು
ಹೂವಿನಹಡಗಲಿಯ ತಾಲ್ಲೂಕಿನ ಕ್ರೀಡಾಂಗಣದಲ್ಲಿ ಉರುಸ್ ಅಂಗವಾಗಿ ಕುಸ್ತಿ ನಡೆಯಿತು   

ಹೂವಿನಹಡಗಲಿ : ಪಟ್ಟಣದಲ್ಲಿ ಹಜರತ್ ರಾಜಾಬಾಗ್ ಸವಾರ್ (ಯಮನೂರು ಸ್ವಾಮಿ) ಉರುಸ್ ಅಂಗವಾಗಿ ತಾಲ್ಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಜಂಗೀ ಕುಸ್ತಿ ಪಂದ್ಯಾವಳಿ ನಡೆದವು.

ಅಖಾಡ ಪೂಜೆಯ ನಂತರ ವರ್ತಕ ಜಿಯಾವುಲ್ಲಾ, ಪತ್ರಕರ್ತ ಎಲ್.ಅಕ್ಬರ್ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು. ಮೊದಲ ದಿನ 50 ಜೊತೆ ಕುಸ್ತಿಗಳು ನಡೆದವು. ಹೊಸಪೇಟೆ, ಮೈಸೂರು, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ, ಕೊಲ್ಲಾಪುರ, ಕಲಬುರಗಿ, ಶಿಕಾರಿಪುರ, ಮಾಸೂರು, ಹರಪನಹಳ್ಳಿಯ ಪ್ರಸಿದ್ಧ ಪೈಲ್ವಾನರು ಸೆಣಸಾಟ ನಡೆಸಿದರು.

ಗಡಿಗಿ ಮಲ್ಲಿಕಪ್ಪ, ಸರ್ಜಪ್ಪನವರ ದಾವಲ್ ಸಾಬ್, ಸೊಪ್ಪಿನ ಶೇಖರಪ್ಪ, ಮುಜುಬು ರಹಿಮಾನ್, ಗಡಿಗಿ ಕೃಷ್ಣ, ಡಿ. ನನ್ನೆಸಾಬ್ ನಿರ್ಣಾಯಕರಾಗಿದ್ದರು. ತಾಲ್ಲೂಕು ಕ್ರೀಡಾಂಗಣದಲ್ಲಿ ನೆರೆದಿದ್ದ ಕುಸ್ತಿ ಪ್ರಿಯರು ಕೇಕೆ, ಚಪ್ಪಾಳೆಯೊಂದಿಗೆ ಕುಸ್ತಿಪಟುಗಳನ್ನು ಪ್ರೋತ್ಸಾಹಿಸುತ್ತಿದ್ದರು.

ADVERTISEMENT

ಉರುಸ್‌ ಕಮಿಟಿ ಅಧ್ಯಕ್ಷ ಎಸ್.ಶಫಿವುಲ್ಲಾ, ಮುಖಂಡರಾದ ಯು.ಹನುಮಂತಪ್ಪ, ಕೆ.ಗೌಸ್ ಮೊಹಿದ್ದೀನ್, ಕೊಟ್ಟೂರು ಗೌಸ್ , ಇಸ್ಮಾಯಿಲ್, ಕೆ. ನಜೀರ್, ಅರುಣಿ ರಫಿ, ಜಂಗ್ಲಿಸಾಬ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.