ADVERTISEMENT

ಎಸ್ಸಿ/ಎಸ್ಟಿ ಹಾಸ್ಟೆಲ್‌ಗೆ ಕುಲಪತಿ ದಿಢೀರ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2019, 11:09 IST
Last Updated 13 ಮಾರ್ಚ್ 2019, 11:09 IST
ಕುಲಪತಿ ಸ.ಚಿ. ರಮೇಶ (ಬಲದಿಂದ ಮೊದಲನೆಯವರು) ಅವರು ಎಸ್ಸಿ/ಎಸ್ಟಿ ಹಾಸ್ಟೆಲ್‌ನಲ್ಲಿ ಊಟ ಮಾಡಿ, ಗುಣಮಟ್ಟ ಪರಿಶೀಲಿಸಿದರು
ಕುಲಪತಿ ಸ.ಚಿ. ರಮೇಶ (ಬಲದಿಂದ ಮೊದಲನೆಯವರು) ಅವರು ಎಸ್ಸಿ/ಎಸ್ಟಿ ಹಾಸ್ಟೆಲ್‌ನಲ್ಲಿ ಊಟ ಮಾಡಿ, ಗುಣಮಟ್ಟ ಪರಿಶೀಲಿಸಿದರು   

ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ‘ಅನನ್ಯ’ ವಸತಿ ನಿಲಕ್ಕೆ ಕುಲಪತಿ ಸ.ಚಿ. ರಮೇಶ ಬುಧವಾರ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಸತಿ ನಿಲಯದ ಅಡುಗೆ ಕೋಣೆ, ಅಲ್ಲಿದ್ದ ದವಸ ಧಾನ್ಯ, ಸ್ವಚ್ಛತೆ ಪರಿಶೀಲಿಸಿದರು. ನಂತರ ವಿದ್ಯಾರ್ಥಿಗಳಿಗೆ ಮಾಡಿದ್ದ ಊಟವನ್ನು ಸವಿದರು. ಸ್ಥಳದಲ್ಲೇ ವಿದ್ಯಾರ್ಥಿಗಳ ಕುಂದು ಕೊರತೆ ಆಲಿಸಿದರು.

‘ಕೆಲ ಕುಂದು ಕೊರತೆಗಳ ಬಗ್ಗೆ ವಿದ್ಯಾರ್ಥಿಗಳು ಗಮನಕ್ಕೆ ತಂದಿದ್ದಾರೆ. ಅವುಗಳನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು. ಬೇಸಿಗೆ ಕಾಲ ಆರಂಭವಾಗಿದೆ. ವಿದ್ಯಾರ್ಥಿಗಳು ನೀರನ್ನು ಮಿತವಾಗಿ ಬಳಸಬೇಕು. ಅಗತ್ಯಕ್ಕಷ್ಟೇ ಉಪಯೋಗಿಸಬೇಕು. ವ್ಯರ್ಥವಾಗಿ ನೀರು ಚೆಲ್ಲಬಾರದು’ ಎಂದು ಕಿವಿಮಾತು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.