ADVERTISEMENT

ಹರಪನಹಳ್ಳಿ: ಅರ್ಧಂಬರ್ಧ ಸುಟ್ಟಿರುವ ಮಹಿಳೆ ಶವ ಪತ್ತೆ; ಅತ್ಯಾಚಾರ, ಕೊಲೆ ಶಂಕೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 5:22 IST
Last Updated 15 ಆಗಸ್ಟ್ 2025, 5:22 IST

ಹರಪನಹಳ್ಳಿ: ತಾಲ್ಲೂಕಿನ ಅರಸೀಕೆರೆ ಕಂಚಿಕೆರೆಯ ನಡುವಿರುವ ಅರಣ್ಯದ ಬಾಳಪ್ಪನ ಮಟ್ಟಿಯ ನಿರ್ಜನ ಪ್ರದೇಶದಲ್ಲಿ ಅರ್ಧಂಬರ್ಧ ಸುಟ್ಟಿರುವ ಮಹಿಳೆ ಶವ ಪತ್ತೆಯಾಗಿದ್ದು, ಅತ್ಯಾಚಾರ ಎಸಗಿ ಕೊಲೆ‌ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಮೃತರನ್ನು ಮಾಚಿಹಳ್ಳಿ ತಾಂಡದ ಆರ್.ಅಶ್ವಿನಿ ಬಾಯಿ (32) ಎಂದು ಗುರುತಿಸಲಾಗಿದೆ.

ಗುರುವಾರ ಬೆಳಿಗ್ಗೆ 9 ಗಂಟೆಯಿಂದ 11 ಗಂಟೆ ನಡುವಿನ ಅವಧಿಯಲ್ಲಿ ಘಟನೆ ನಡೆದಿರುವ ಅನುಮಾನ ಇದ್ದು, ಪೋಷಕರು ದೂರು ಸಲ್ಲಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.