ADVERTISEMENT

ಬೀಡಿ ಕಟ್ಟಿ ಬದುಕು ಕಟ್ಟಿಕೊಂಡರು

ಎಚ್.ಎಸ್.ಶ್ರೀಹರಪ್ರಸಾದ್
Published 30 ಏಪ್ರಿಲ್ 2019, 19:45 IST
Last Updated 30 ಏಪ್ರಿಲ್ 2019, 19:45 IST
ಮರಿಯಮ್ಮನಹಳ್ಳಿಯ ಇಂದಿರಾ ನಗರದಲ್ಲಿ ಬೀಡಿ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರು
ಮರಿಯಮ್ಮನಹಳ್ಳಿಯ ಇಂದಿರಾ ನಗರದಲ್ಲಿ ಬೀಡಿ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರು   

ಮರಿಯಮ್ಮನಹಳ್ಳಿ: ಬೀಡಿ ಕಟ್ಟುವ ಕಾಯಕದ ಮೂಲಕ ಪಟ್ಟಣದ ಹಲವು ಮಹಿಳೆಯರು ಬದುಕು ಕಟ್ಟಿಕೊಂಡಿದ್ದಾರೆ.

ಅದರಲ್ಲೂ ಅಲ್ಪಸಂಖ್ಯಾತ ಸಮುದಾಯದವರು ಈ ವೃತ್ತಿಯ ಮೂಲಕ ಜೀವನ ಹಸನು ಮಾಡಿಕೊಳ್ಳುತ್ತಿದ್ದಾರೆ.ಪಟ್ಟಣದ 11, 12, 13ನೇ ಮುಸ್ಲಿಂ ಪ್ಲಾಟ್‍ನಲ್ಲಿ ಸುಮಾರು 250ಕ್ಕೂ ಹೆಚ್ಚು ಮಹಿಳೆಯರು ಮತ್ತು ಇಂದಿರಾ ನಗರದಲ್ಲಿ 100ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಬೀಡಿ ಕಟ್ಟುವುದನ್ನೇ ವೃತ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಶಾಲೆ ಬಿಟ್ಟ ಯುವತಿಯರು, ಮಧ್ಯ ವಯಸ್ಕರು ಹಾಗೂ ಹಿರಿಯ ಮಹಿಳೆಯರು ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಬಹುತೇಕ ಮಹಿಳೆಯರು ದಶಕಗಳಿಂದ ಈ ಕೆಲಸ ಮಾಡುತ್ತಿದ್ದಾರೆ. ಮಕ್ಕಳ ಓದು–ಬರಹ, ಮುಂಜಿ, ಮದುವೆ ಸೇರಿದಂತೆ ಎಲ್ಲ ಕೆಲಸಕ್ಕೂ ನೆರವಾಗುತ್ತಿದ್ದಾರೆ.

ADVERTISEMENT

ಸಾವಿರ ಬೀಡಿ ಕಟ್ಟಲು ₹150 ನೀಡುತ್ತಾರೆ. ಇನ್ನು ಒಬ್ಬ ಮಹಿಳೆ ದಿನಕ್ಕೆ ಒಂದು ಸಾವಿರಕ್ಕೂ ಅಧಿಕ ಬೀಡಿಗಳನ್ನು ತಯಾರಿಸುತ್ತಾರೆ. ಅವರಿಗೆ ಸರ್ಕಾರದಿಂದ ಸಿಗುವ ಯಾವ ಸವಲತ್ತುಗಳ ಬಗ್ಗೆ ಅರಿವಿಲ್ಲ. ಅದರ ಬಗ್ಗೆ ತಲೆ ಕೂಡ ಕೆಡಿಸಿಕೊಂಡಿಲ್ಲ.

‘ನೋಡ್ರಿ 20 ವರ್ಷದಿಂದ ಬೀಡಿ ಕಟ್ಟುವ ಕಾಯಕ ಮಾಡುತ್ತಿದ್ದೇನೆ. ನನ್ನಂತೆ ಹಲವರು ದುಡಿಯುತ್ತಿದ್ದಾರೆ. ಸರ್ಕಾರದಿಂದ ಇದುವರೆಗೆ ನಯಾ ಪೈಸೆ ನೆರವು ಸಿಕ್ಕಿಲ್ಲ. ಯಾವ ಸೌಲಭ್ಯವೂ ಕೊಟ್ಟಿಲ್ಲ’ ಎಂದು ಇಂದಿರಾ ನಗರದ ರಜೀಯಾ ಬೇಗಂ ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.