ADVERTISEMENT

ಬಿಜೆಪಿಯಿಂದ ಕನಕದುರ್ಗೆಗೆ ಪೂಜೆ

​ಪ್ರಜಾವಾಣಿ ವಾರ್ತೆ
Published 9 ಮೇ 2025, 14:44 IST
Last Updated 9 ಮೇ 2025, 14:44 IST
ಭಾರತೀಯ ಸೇನೆಯ ಕಾರ್ಯಾಚರಣೆ ಯಶಸ್ಸಿಗೆ ಪ್ರಾರ್ಥಿಸಿ ಬಿಜೆಪಿ ಕಾರ್ಯಕರ್ತರು ಬಳ್ಳಾರಿಯ ಕನಕದುರ್ಗಮ್ಮ ದೇವಿಗೆ ಈಡುಗಾಯಿ ಸೇವೆ ಸಲ್ಲಿಸಿದರು
ಭಾರತೀಯ ಸೇನೆಯ ಕಾರ್ಯಾಚರಣೆ ಯಶಸ್ಸಿಗೆ ಪ್ರಾರ್ಥಿಸಿ ಬಿಜೆಪಿ ಕಾರ್ಯಕರ್ತರು ಬಳ್ಳಾರಿಯ ಕನಕದುರ್ಗಮ್ಮ ದೇವಿಗೆ ಈಡುಗಾಯಿ ಸೇವೆ ಸಲ್ಲಿಸಿದರು   

ಬಳ್ಳಾರಿ: ಭಾರತೀಯ ಸೇನೆ ಕೈಗೊಂಡಿರುವ ಕಾರ್ಯಾಚರಣೆ ಯಶಸ್ವಿಯಾಗಲೆಂದು ಬಿಜೆಪಿ ವತಿಯಿಂದ ಕನಕದುರ್ಗಮ್ಮ ದೇಗುಲದಲ್ಲಿ ಶುಕ್ರವಾರ ಪೂಜೆ ಸಲ್ಲಿಸಲಾಯಿತು. ಈಡುಗಾಯಿ ಅರ್ಪಿಸಿ, ವಿಶೇಷ ಪೂಜೆ ಮಾಡಿಸಿ ಮುಖಂಡರು ಪ್ರಾರ್ಥಿಸಿದರು.

ವಿಧಾನ ಪರಿಷತ್‌ನ ಸದಸ್ಯ ವೈ.ಎಂ ಸತೀಶ ಮಾತನಾಡಿ, ‘ಉಗ್ರರು ಪೆಹಲ್ಗಾಮ್‌ನಲ್ಲಿ ನಡೆಸಿದ ದಾಳಿಗೆ ಭಾರತ ನೀಡಿದ ಪ್ರತಿಕ್ರಿಯೆ ಮತ್ತು ಚಾಲ್ತಿಯಲ್ಲಿರುವ ಕಾರ್ಯಾಚರಣೆಯಲ್ಲಿ ಭಾರತಕ್ಕೆ ಜಯವಾಗಬೇಕು ಎಂಬ ಕಾರಣಕ್ಕೆ ಪೂಜೆ ಮಾಡಿಸಿದ್ದೇವೆ’ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ನಾಯಕಿ ಸುಗುಣಾ ಮಾತನಾಡಿ, ‘ಮೊದಲಿಗೆ ಮೋದಿಗೆ ಧನ್ಯವಾದ ಹೇಳುತ್ತೇವೆ. ಮಹಿಳೆಯರ ಸಿಂಧೂರ ಅಳಿಸಿರುವ ಉಗ್ರರಿಗೆ ಬುದ್ಧಿಕಲಿಸಲು ಅವರು ಹೆಣ್ಣುಮಕ್ಕಳನ್ನೇ ಮುಂದಕ್ಕೆ ತಂದಿದ್ದಾರೆ. ಇದು ಖುಷಿಯ ವಿಚಾರ’ ಎಂದರು.

ADVERTISEMENT

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ದಿವಾಕರ್‌ ಮಾತನಾಡಿ, ‘ದೇಶದ ಹೆಮ್ಮೆಯ ಸೈನಿಕರಿಗೆ ಕನಕದುರ್ಗಮ್ಮ ಶಕ್ತಿ ನೀಡಲಿ. ಅವರಿಂದಲೇ ನಾವು ಸುರಕ್ಷಿತವಾಗಿದ್ದೇವೆ. ದೇಶದಲ್ಲಿ ಹಿಂದು– ಮುಸ್ಲಿಮರು ಸಹೋದರರಂತೆ ಇದ್ದರು. ಆದರೆ, ಉಗ್ರರು ಅಮಾಯಕ ನಾಗರಿಕರನ್ನು ಕೊಂದು ಇಲ್ಲಿನ ಸೌಹಾರ್ದತೆ ಕದಡಿದಿದ್ದಾರೆ. ದೇಶದಲ್ಲಿ ಶಾಂತಿ ನೆಲೆಸಲು ಸಿಂಧೂರ ಕಾರ್ಯಚರಣೆಯಲ್ಲಿ ಜಯ ಸಿಗಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.