ADVERTISEMENT

ಕಂಪ್ಲಿ | ಸಿಡಿಲು ಬಡಿದು ಯುವಕ ಸಾವು, ಐವರಿಗೆ ಗಾಯ 

​ಪ್ರಜಾವಾಣಿ ವಾರ್ತೆ
Published 20 ಮೇ 2025, 15:29 IST
Last Updated 20 ಮೇ 2025, 15:29 IST
<div class="paragraphs"><p>ಸಿಡಿಲು (ಸಾಂದರ್ಭಿಕ ಚಿತ್ರ )</p></div>

ಸಿಡಿಲು (ಸಾಂದರ್ಭಿಕ ಚಿತ್ರ )

   

ಕಂಪ್ಲಿ: ತಾಲ್ಲೂಕಿನ ದೇವಲಾಪುರ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದ ಪ್ರತ್ಯೇಕ ಘಟನೆಯಲ್ಲಿ ಸಿಡಿಲಿಗೆ ಒಬ್ಬ ಯುವಕ ಬಲಿಯಾಗಿದ್ದು, ಐವರು ಗಾಯಗೊಂಡಿದ್ದಾರೆ.

ಸಿಡಿಲಿನ ಹೊಡೆತಕ್ಕೆ ಗಾಯಗೊಂಡಿದ್ದ ಕುರಿ ಕರಿಬಸಪ್ಪ ಕುರಿ ಮೂರ್ತಿ (23) ಬೀಮ್ಸ್‌ನಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

ADVERTISEMENT

ಗ್ರಾಮದ ಸುಗ್ಗೇನಹಳ್ಳಿ ರಸ್ತೆ ವ್ಯಾಪ್ತಿಯಲ್ಲಿ ಹಿರೇಹೊಲದಲ್ಲಿನ ಕುರಿಮಂದೆಯಯಲ್ಲಿದ್ದ ಕುರಿ ದೊಡ್ಡಬಸಪ್ಪ(50), ಕುರಿ ಪಂಪಾಪತಿ (18) ಮತ್ತು ಗ್ರಾಮದ ರಾಜನಮಟ್ಟಿ ಪ್ರದೇಶದ ತಿಪ್ಪೇಸ್ವಾಮಿ (22), ಹೇಮಣ್ಣ (35) ಮತ್ತು ಮಣಿಕಂಠ (18) ಎಂಬವರು ಸಿಡಿಲಿನಿಂದ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಬೀಮ್ಸ್‌ಗೆ ದಾಖಲಿಸಲಾಗಿದೆ. ಗ್ರಾಮ ಆಡಳಿತಾಧಿಕಾರಿ ಅಬ್ದುಲ್ ನಿಯಾಜ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.