ADVERTISEMENT

ಸಂಡೂರು: ಉದ್ಯೋಗ ಖಾತ್ರಿ ಕಾಮಗಾರಿ ವೀಕ್ಷಿಸಿದ ಜಿ.ಪಂ. ಸಿಇಒ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2023, 14:21 IST
Last Updated 9 ಆಗಸ್ಟ್ 2023, 14:21 IST
ಸಂಡೂರು ತಾಲ್ಲೂಕಿನ ನಿಡಗುರ್ತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 73–ಹುಲಿಕುಂಟೆ ಗ್ರಾಮದಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಬೆಳೆಯಲಾದ ಡ್ರ್ಯಾಗನ್ ಫ್ರೂಟ್ ತೋಟವನ್ನು ಜಿಲ್ಲಾ ಪಂಚಾಯ್ತಿ ಕಾರ್ಯನಿರ್ಹಾಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು ವೀಕ್ಷಿಸಿದರು

ಸಂಡೂರು: ನರೇಗಾ ಯೋಜನೆಯಡಿ ಕೈಗೊಂಡ ಮಾದರಿ ಶಾಲೆ, ಅಮೃತ ಸರೋವರ, ಡ್ರ್ಯಾಗನ್ ಫ್ರೂಟ್ ತೋಟ, ರೇಷ್ಮೆ, ರಸ್ತೆಬದಿ ನೆಡುತೋಪು ಕಾಮಗಾರಿಗಳನ್ನು ಜಿಲ್ಲಾ ಪಂಚಾಯ್ತಿ ಕಾರ್ಯನಿರ್ಹಾಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಬುಧವಾರ ಪರಿಶೀಲಿಸಿದರು.

ಇದೇ ವೇಳೆ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನಕ್ಕೆ ಅಮೃತ ಸರೋವರ ದಂಡೆಯ ಮೇಲೆ ಗಿಡ ನೆಡುವ ಮೂಲಕ‌ ಚಾಲನೆ ನೀಡಿದರು. ಉತ್ತರ ಮಲೈ ಗ್ರಾಮದಲ್ಲಿ ಸ್ವಚ್ಛ ಬುಧವಾರ ಅಭಿಯಾನದಲ್ಲಿ ಭಾಗವಹಿಸಿದರು.

ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಎಚ್. ಷಡಕ್ಷರಯ್ಯ, ನರೇಗಾ
ಸಹಾಯಕ ನಿರ್ದೇಶಕರಾದ ರೇಣುಕಾಚಾರ್ಯ, ಅರಣ್ಯ ಇಲಾಖೆಯ ದುರುಗಪ್ಪ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಮಹಬಾಷ್ ಎನ್., ಪ್ರಶಾಂತ್ ಯಾದವ್, ಪಿಡಿಒ ಪ್ರಕಾಶ್ ಎನ್., ಐಇಸಿ ಸಂಯೋಜಕ ಯಂಕಪ್ಪ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.