ADVERTISEMENT

ಅಂತರರಾಷ್ಟ್ರೀಯ ಯೋಗ ಸಮ್ಮೇಳನ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 5:46 IST
Last Updated 2 ಜನವರಿ 2014, 5:46 IST

ಆನೇಕಲ್‌: ನಗರದ ಹೊರವಲಯದ ಜಿಗಣಿ ಸಮೀಪದ ಗಿಡ್ಡೇನಹಳ್ಳಿ ಪ್ರಶಾಂತಿ ಕುಠೀರದ ಸ್ವಾಮಿ ವಿವೇಕಾ ನಂದ ಯೋಗ ಅನುಸಂಧಾನ ಸಂಸ್ಥಾನ ಯೋಗ ವಿಶ್ವ ವಿದ್ಯಾಲಯದಲ್ಲಿ  ೨೦ ನೇ ಅಂತರರಾಷ್ಟ್ರೀಯ ಯೋಗ ಸಮ್ಮೇ ಳನ ಜನವರಿ ೨ರಿಂದ (ಗುರುವಾರ) ೫ರ ವರೆಗೆ ನಡೆಯಲಿದೆ ಎಂದು ವಿಶ್ವ ವಿದ್ಯಾಲಯದ ಕುಲಪತಿ ಡಾ. ಎಚ್. ಆರ್. ನಾಗೇಂದ್ರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ‘ಯೋಗ ಸಮ್ಮೇಳ ನದ ಅಂಗವಾಗಿ ಆರೋಗ್ಯ ಎಕ್ಸ್‌ಪೋ ಏರ್ಪಡಿಸಲಾಗಿದ್ದು ಜನವರಿ ಇದು ೨ ರಿಂದ ೧೦ ರ ವರೆಗೆ ನಡೆಯಲಿದೆ. ‘ಸಾರ್ವಜನಿಕ ಆರೋಗ್ಯ ಕಾಪಾಡಲು ಮಧುಮೇಹದ ಬಗ್ಗೆ ಮುನ್ನೆಚ್ಚರಿಕೆ ಹಾಗೂ ಶಿಕ್ಷಣ’ ಎಂಬ ವಿಷಯ ೨೦ನೇ ಯೋಗ ಸಮಾವೇಶದ ಮುಖ್ಯ ವಿಷಯವಾಗಿರುತ್ತದೆ’ ಎಂದರು.

‘ಆಧುನಿಕ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯ ಬದಲಾವಣೆ ಗಳಿಂದಾಗಿ ಭಾರತ ಮಧುಮೇಹಿಗಳ ರಾಜಧಾನಿಯಾಗುವತ್ತ ದಾಪುಗಾಲು ಇಡುತ್ತಿದೆ. ೨೦೫೦ ರ ವೇಳೆಗೆ ಭಾರತ ದಲ್ಲಿ ೭ ಕೋಟಿ ಜನರು ಮಧು ಮೇಹಿ ಗಳು ಇರಲಿದ್ದಾರೆ ಎಂದು ಊಹಿಸ ಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ವನ್ನು ಮಧುಮೇಹ ಮುಕ್ತ ರಾಷ್ಟ್ರವ ನ್ನಾಗಿ ಮಾಡಲು ಎಲ್ಲ ಸಂಸ್ಥೆ ಗಳು ಪಣ ತೊಡಬೇಕಾಗಿದೆ.

ವಿಶೇಷ ವಾಗಿ ವೈದ್ಯ ಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸು ವವರು ನವೀನ ಸಂಶೋಧನೆಗಳು, ತಂತ್ರಗಳನ್ನು ಕಂಡುಹಿಡಿಯ ಬೇಕಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಎಸ್.ವ್ಯಾಸ ವಿಶ್ವವಿದ್ಯಾಲಯ ಈ ವರ್ಷದ ಅಂತರರಾಷ್ಟ್ರೀಯ ಯೋಗ ಸಮಾವೇಶದಲ್ಲಿ ಹೊಸ ಬೆಳಕು ಚೆಲ್ಲಲು ಚಿಂತನೆ ನಡೆಸಿದೆ’ ಎಂದರು.

ಮಧುಮೇಹ ನಿಯಂತ್ರಣ, ಶಿಕ್ಷಣ, ವಿವಿಧ ಆಸನಗಳು, ಆಹಾರ ವಿಧಾನ ಇವುಗಳ ಬಗ್ಗೆ ಸಮಾವೇಶದಲ್ಲಿ ತಜ್ಞರು ಪ್ರಬಂಧಗಳನ್ನು ಮಂಡಿಸಲಿ ದ್ದಾರೆ. ಯೋಗ ಥೆರ ಪಿಗಳ ಮೂಲಕ ಮಧುಮೇಹ ನಿಯಂತ್ರಣ, ಚಿಕಿತ್ಸಾ ವಿಧಾನಗಳು, ಆಸನಗಳ ತಂತ್ರಗಳ ಬಗ್ಗೆ ಈ ಸಂಬಂಧ ಕಾರ್ಯ ನಿರ್ವಹಿಸುತ್ತಿರುವ ವಿವಿಧ ವೃತ್ತಿಪರ ಸಂಸ್ಥೆಗಳು, ನೀತಿ ನಿರೂಪ ಕರು ಹಾಗೂ ಔಷಧಿ ಕ್ಷೇತ್ರದ ಉದ್ಯಮಿ ಗಳೊಂದಿಗೆ ಚರ್ಚೆ ನಾಲ್ಕು ದಿನಗಳ ಕಾಲ ನಡೆಯಲಿವೆ ಎಂದರು.

ಸಮಾವೇಶದಲ್ಲಿ ಕರ್ನಾಟಕ ಮಧು ಮೇಹ ಸಂಸ್ಥೆಯ ನಿರ್ದೇಶಕ ಡಾ.ಕೆ. ಆರ್. ನರಸಿಂಹಶೆಟ್ಟಿ, ತಮಿಳು ನಾಡಿನ ಕೊಯಮತ್ತೂರಿನ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ರಾಮ್‌ ಮನೋಹರ್,ಅಮೆರಿಕದಹಾರ್ವರ್ಡ್ ಮೆಡಿಕಲ್ ಸ್ಕೂಲ್ ನ ಸಹಾಯಕ ಪ್ರಾಧ್ಯಾಪಕ ಡಾ. ಸತ್‌ಬೀರ್‌ ಖಾಲ್ಸಾ, ವಾಷಿಂಗ್‌ಟನ್‌ನ ಡಾ.ರಾಜನಾರಾ ಯಣ್, ಜರ್ಮನಿಯ ಡಾ.ಕ್ರಿಸ್ಟೋ ಫರ್‌ ಗಾರ್ನರ್ ಸೇರಿದಂತೆ ವಿವಿಧ ಸಂಸ್ಥೆಗಳ ತಜ್ಞರು ಉಪನ್ಯಾಸ ಹಾಗೂ ಪ್ರಬಂಧ ಮಂಡನೆ ಮಾಡು ವರು. ಸ್ವಾಮೀಜಿ ದಯಾನಂದ ಸರಸ್ವತಿ ಅವರಿಂದ ಉಪನ್ಯಾಸ ಏರ್ಪಡಿಸ ಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.