ADVERTISEMENT

ಉಮೇಶ್ ಕತ್ತಿ ಹೆೇಳಿಕೆಗೆ ಖಂಡನೆ

ಪ್ರತ್ಯೇಕ ಉತ್ತರಕರ್ನಾಟಕ ರಾಜ್ಯದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 9:11 IST
Last Updated 5 ಡಿಸೆಂಬರ್ 2013, 9:11 IST

ದೇವನಹಳ್ಳಿ: ಪ್ರತ್ಯೇಕ ರಾಜ್ಯದ ಬಗ್ಗೆ ಮಾಜಿ ಸಚಿವ ಉಮೇಶ್‌ ಕತ್ತಿ ನೀಡಿರುವ ಹೇಳಿಕೆ ಖಂಡಿಸಿ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯ ಕರ್ತರು ಪಟ್ಟಣದಲ್ಲಿ ಪಂಜಿನ ಮೆರ ವಣಿಗೆ ನಡೆಸಿ ಉಮೆಶ್‌ ಕತ್ತಿ ಪ್ರತಿಕೃತಿಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಮಾತನಾಡಿದ ತಾಲ್ಲೂಕು ಕ.ರ.ವೇ ಅಧ್ಯಕ್ಷ ಶಿವಪ್ರಸಾದ್‌, ‘ನೆಮ್ಮದಿ ಯಿಂದಿರುವ ರಾಜ್ಯದ ಜನರಲ್ಲಿ ಪ್ರತ್ಯೇಕ ರಾಜ್ಯದ ಕಲ್ಪನೆ ಮೂಡಿ ಸುತ್ತಿರುವ ಕತ್ತಿ ಅವರ ಹೇಳಿಕೆ ಸರಿಯಲ್ಲ. ಜವಾಬ್ದಾರಿ ಯುತ ಸ್ಥಾನದಲ್ಲಿರುವ ಅವರು ಬಯಲು ಸೀಮೆ ಅಭಿ ವೃದ್ಧಿಯಾಗಿಲ್ಲ. ಹೀಗಾಗಿ ಪ್ರತ್ಯೇಕ ರಾಜ್ಯದ ಅವಶ್ಯಕತೆ ಇದೆ ಎಂದು ಹೇಳುವುದು ಖಡನೀಯ’ ಎಂದರು.

ನಗರ ಅಧ್ಯಕ್ಷ ಉಮೇಶ್‌ ಮಾತ ನಾಡಿ, ‘ಪ್ರಚಾರ ಪಡೆಯುವ ದೃಷ್ಟಿ ಯಿಂದ ಇಂತಹ ಹೇಳಿಕೆ ನೀಡಿರ ಬಹುದು. ಅದರೆ ಪ್ರತ್ಯೇಕ ರಾಜ್ಯ ಬೇಡಿಕೆಯ ಹೇಳಿಕೆ ಅವರ ಮೂರ್ಖ ತನವನ್ನು ಬಿಂಬಿಸುತ್ತದೆ. ಮುಂದೆ ಯೂ ಅವರು ಇಂತಹ ಹೇಳಿಕೆ ನೀಡಿದರೆ ಅವರ ನಿವಾಸದ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕ.ರ.ವೇ ಉಪಾಧ್ಯಕ್ಷ ಮಂಜು ನಾಥ್‌, ಕಾರ್ಯದರ್ಶಿ ಅನಿಲ್‌, ಖಚಾಂಚಿ ರಾಜ್‌ ಕುಮಾರ್‌, ಶ್ರೀಧರ್‌, ಚಿಕ್ಕರಾಮು, ಶಿವಣ್ಣ, ರಾಜು, ರವಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.