ADVERTISEMENT

ಕಣ್ಣಿನ ಆಸ್ಪತ್ರೆ ಕಾಮಗಾರಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 8:07 IST
Last Updated 14 ಡಿಸೆಂಬರ್ 2013, 8:07 IST

ದೊಡ್ಡಬಳ್ಳಾಪುರ: ಲಯನ್ಸ್ ಕ್ಲಬ್‌ನ ಅಂತರರಾಷ್ಟ್ರೀಯ ಅಧ್ಯಕ್ಷ ಬ್ಯಾರಿ ಜೆ. ಪಾಮರ್ ದೊಡ್ಡಬಳ್ಳಾಪುರಕ್ಕೆ ಗುರು ವಾರ ಭೇಟಿ ನೀಡಿ ಇಲ್ಲಿನ ಲಯನ್ಸ್  ಚಾರಿಟೀಸ್‌ ಟ್ರಸ್ಟ್‌, ಲಯನ್ಸ್ ಕ್ಲಬ್ ವತಿಯಿಂದ ನಿರ್ಮಿಸುತ್ತಿರುವ ಕಣ್ಣಿನ ಆಸ್ಪತ್ರೆಯ ನಿರ್ಮಾಣ ಕಾರ್ಯ ಹಾಗೂ ಲಯನ್ಸ್ ಸೇವಾ ಕಾರ್ಯ ಗಳನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿ ಸೇವಾಕಾರ್ಯಗಳಲ್ಲಿ ಮುಂಚೂಣಿ ಯಲ್ಲಿರುವ ಲಯನ್ಸ್ ಕ್ಲಬ್‌ ಆಶಯ ಗಳಿಗೆ ಪೂರಕವಾಗಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವಂತೆ ಸಂಸ್ಥೆಯ ಪದಾಧಿ ಕಾರಿಗಳಿಗೆ  ಸಲಹೆ ನೀಡಿದರು. ಲಯನ್ಸ್ ಚಾರಿಟೀಸ್ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಮಾತನಾಡಿ, ‘ಲಯನ್ಸ್ ಕ್ಲಬ್ ವತಿ ಯಿಂದ ಇಲ್ಲಿನ ಜನರ ಅನುಕೂಲಕ್ಕಾಗಿ `೧.೫ ಕೋಟಿ ವೆಚ್ಚದಲ್ಲಿ ಲಯನ್ಸ್ ಕಣ್ಣಿನ ಆಸ್ಪತ್ರೆ ನಿರ್ಮಾಣ ಮಾಡ ಲಾಗುತ್ತಿದೆ’ ಎಂದರು.ಲಯನ್ಸ್ ಕ್ಲಬ್ ವತಿಯಿಂದ ಬ್ಯಾರಿ ಜೆ.ಪಾಮರ್ ದಂಪತಿಯನ್ನು  ಸನ್ಮಾನಿಸ ಲಾಯಿತು.

ಕಾರ್ಯಕ್ರಮದಲ್ಲಿ ಕಣ್ಣಿನ ಆಸ್ಪತ್ರೆ ನಿರ್ಮಾಣಕ್ಕೆ  ದಾನ ನೀಡಿರುವವರನ್ನು ಲಯನ್ಸ್ ಕ್ಲಬ್‌ ಅಂತರರಾಷ್ಟ್ರೀಯ ಅಧ್ಯಕ್ಷ ಬ್ಯಾರಿ ಜೆ.ಪಾಮರ್ ಅಭಿನಂದಿ ಸಿದರು. ಲಯನ್ಸ್ ಜಿಲ್ಲಾ ರಾಜ್ಯಪಾಲ ಆರ್.ಕುಮಾರ್, ಲಯನ್ ರಂಗ ನಾಥ್‌, ಪ್ರೇಮನಾಥ್,  ಲಯನ್ಸ್ ಚಾರಿಟೀಸ್ ಟ್ರಸ್ಟ್‌ನ ಕೆ.ಎಲ್. ಕೃಷ್ಣಮೂರ್ತಿ, ಎ.ವೆಂಕಟೇಶ್, ಎಸ್‌. ನಟರಾಜ್, ಎಂ.ಪಿ.ಸಿ. ವೆಂಕಟೇಶ್, ಲಯನ್ಸ್ ಕ್ಲಬ್ ಅಧ್ಯಕ್ಷ ಆರ್. ವಿ.ಶಿ ವಣ್ಣ, ಕಾರ್ಯದರ್ಶಿ ಡಿ.ಕೆ. ಸೋಮ ಶೇಖರ್,  ಖಜಾಂಚಿ ಬೂದಿ ಪಲ್ಲಿ ಶ್ರೀನಿ ವಾಸ್, ಲಯನೆಸ್ ಕ್ಲಬ್ ಅಧ್ಯಕ್ಷೆ ಅನ್ನಪೂರ್ಣಮ್ಮ, ಶಿವಣ್ಣ, ಕಾರ್ಯ ದರ್ಶಿ ಎನ್.ರೇಣುಕಾ ನಾಗರಾಜ್,  ಖಜಾಂಚಿ ಮಂಗಳಗೌರಿ ಪರ್ವತಯ್ಯ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.