ADVERTISEMENT

ಕನ್ನಡಿಗರ ಆಲೋಚನಾ ಕ್ರಮ ಬದಲಾಗಲಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 19:30 IST
Last Updated 22 ಅಕ್ಟೋಬರ್ 2011, 19:30 IST
ಕನ್ನಡಿಗರ ಆಲೋಚನಾ ಕ್ರಮ ಬದಲಾಗಲಿ
ಕನ್ನಡಿಗರ ಆಲೋಚನಾ ಕ್ರಮ ಬದಲಾಗಲಿ   

ವಿಜಯಪುರ:ಉದಾರೀಕರಣ, ಖಾಸಗೀಕರಣ, ಜಾಗತೀಕರಣ ಗಳು ಕನ್ನಡಿಗರನ್ನು ಒಟ್ಟಾಗಿ ಮುಳುಗಿಸಬಹುದೆಂಬ ಆತಂಕ ಎದುರಾಗಿದೆ. ಸಾಮಾಜಿಕ ಸಂಬಂಧಗಳು ಕ್ಷೀಣ, ಅಪರಾಧೀಕರಣತ್ತ ಯುವಜನತೆ ಸಾಗುತ್ತಿದೆ.  ಕನ್ನಡಿಗರ ಆಲೋಚನಾ ವಿಧಾನ ಬದಲಾಗಬೇಕು~ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ, ತಹಶೀಲ್ದಾರ್ ಎಲ್.ಸಿ.ನಾಗರಾಜು (ಲಿಂಚಿ) ಅವರ ಅಭಿಪ್ರಾಯ ಇದು.

ಇಲ್ಲಿನ ಗಾಂಧಿಚೌಕದಲ್ಲಿ ನಿರ್ಮಿಸಲಾಗಿದ್ದ ಮತ್ತೂರು ಕೃಷ್ಣಮೂರ್ತಿ ಮಂಟಪದ, ರಂಗಕಲಾವಿದ ಅರಸು ವೇದಿಕೆಯಲ್ಲಿ ಜರುಗಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ 15 ನೇ ಕನ್ನಡ ಸಾಹಿತ್ಯ ಸಮ್ಮಳನದ ಸಮ್ಮಳನಾಧ್ಯಕ್ಷರಾಗಿ ಭಾಗವಹಿಸಿ ಅವರು ಆಶಯಭಾಷಣ ಮಾತನಾಡಿದರು.

`ನಮ್ಮಲ್ಲಿ ನೆನಪಿನ ಶಕ್ತಿ ಕುಂದಿದ್ದು ಚರಿತ್ರೆಯನ್ನು ಮರೆಯುತ್ತಿದ್ದೇವೆ. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಪರಂಪರೆಯ ಬಗ್ಗೆ ಇಂದು ನಾವು ಹೆಮ್ಮೆಪಡಲು ಕನ್ನಡ ಚಳುವಳಿಗಳು ಕಾರಣ. ಸಾಹಿತ್ಯವು ರೈತಾಪಿ ಸಮುದಾಯದ ವಾಸ್ತವ ಮತ್ತು ಹಸಿವನ್ನು ಪ್ರತಿನಿಧಿಸಬೇಕು. ಮನುಕುಲದ ಪ್ರಗತಿಗೆ ಉತ್ಪಾದನೆ ಮತ್ತು ಉಪಯೋಗದ ನಡುವೆ ಹೆಚ್ಚಿರುವ ಅಂತರವೇ ಕಾರಣವಾಗಿದ್ದು ಸಾಂಘಿ ಕ ಹಿನ್ನಡೆ ಉಂಟಾಗಿದೆ~ ಎಂದು ಅವರು ವಿವರಿಸಿದರು.

`ಕನ್ನಡ ನಾಡು- ನುಡಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ನೀಡಿರುವ ಕೊಡುಗೆ ಅಪಾರ. ರೇಷ್ಮೆಯನ್ನು ಪರಿಚಯಿಸಿದ ಹರಿಕಾರ ಟಿಪ್ಪು ವೈಜ್ಞಾನಿಕ ಕೃಷಿ, ನೀರಿನ ಸಂಗ್ರಹಣೆಗೆ ಕೆರೆಗಳ ಪರಿಕಲ್ಪನೆಗೆ ನೀಡಿದ ಕೊಡುಗೆ ಅಪಾರ. ನಮ್ಮ ಜನ, ನೆಲ-ಜಲ, ಭಾಷೆಯನ್ನು ರಕ್ಷಿಸಿಕೊಳ್ಳದ ಹೊರತು ಉಳಿಗಾಲವಿಲ್ಲ. ಭಾಷೆಯ ಮೇಲೆ ಆಗುತ್ತಿರುವ ವಸಾಹತುಶಾಹಿ ಹಿಂಸೆಯು ನಿಲ್ಲಬೇಕು~ ಎಂದು ಅವರು ತಿಳಿಸಿದರು.ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಕೆ.ರಾಜು ಅವರು ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಚಿ.ಮಾ.ಸುಧಾಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ವೆಂಕಟೇಶಯ್ಯ, ಕನ್ನಡ ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಸುಧೀಂದ್ರ, ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ನಾರಾಯಣಸ್ವಾಮಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮಂಡಿಬೆಲೆ ರಾಜಣ್ಣ, ದೇವನಹಳ್ಳಿ ಪುರಸಭೆ ಮುಖ್ಯಾಧಿಕಾರಿ ಮುನಿಸ್ವಾಮಿ,
 
ಪುರಸಭಾಧ್ಯಕ್ಷೆ ರತ್ನಮ್ಮರವಿಕುಮಾರ್, ಪುರಸಭಾ ಮಾಜಿ ಅಧ್ಯಕ್ಷ ಚಿನ್ನಯ್ಯ, ಮಾಜಿ ಉಪಾಧ್ಯಕ್ಷ ಎನ್.ನಾರಾಯಣಸ್ವಾಮಿ, ಗ್ರಾಮಾಂತರ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಭೀಮರಾಜು, ದೇವನಹಳ್ಳಿ ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎನ್.ನಾಗೇಶ್, ನೆಲಮಂಗಲ ಜಿ.ವಿ.ಕುಮಾರ್, ದೊಡ್ಡಬಳ್ಳಾಪುರ ದೇವರಾಜು,

ಗುರಪ್ಪ, ತಾಲ್ಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಆರ್.ಎಂ.ಮುನಿರಾಜು, ವಿಜಯಪುರ ವಾಲ್ಮೀಕಿ ಅಭಿವೃದ್ಧಿ ಸಂಘದ ಅಧ್ಯಕ್ಷ ರಮೇಶ್, ಕಾರ್ಯದರ್ಶಿ ನರಸಿಂಹರಾಜು, ಮತ್ತಿತರರು ಪಾಲ್ಗೊಂಡಿದ್ದರು. ಚಂದ್ರಶೇಖರ್ ಸ್ವಾಗತಿಸಿದರು. ಹಡಪದ್ ನಿರೂಪಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು. ಕಲಾವಿದ ಎಂ.ವಿ.ನಾಯ್ಡು ಸಂಗಡಿಗರು ಪ್ರಾರ್ಥಿಸಿದರು.

ವಾಲ್ಮೀಕಿ ಜಯಂತಿ: ಇದೇ ಸಂದರ್ಭದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅಶ್ವತ್ಥರಾಮಯ್ಯ ಅವರು `ಅರಿಷಡ್ವರ್ಗಗಳನ್ನು ಜಯಿಸಿ ಸತತ ಸಾಧನೆ ಮಾಡಿದರೆ ಮಾನವನು ಮಹರ್ಷಿಯಾಗುತ್ತಾನೆಂಬುದಕ್ಕೆ ವಾಲ್ಮೆಕಿ ಮಹರ್ಷಿಗಳ ಜೀವನ ನಿದರ್ಶನ~ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.