ADVERTISEMENT

ಖಾಸಗಿ ಭೂ ಮಾಪಕ ಲೋಕಾಯುಕ್ತ ಬಲೆಗೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 9:43 IST
Last Updated 4 ಡಿಸೆಂಬರ್ 2013, 9:43 IST

ದೊಡ್ಡಬಳ್ಳಾಪುರ:  ತಾಲ್ಲೂಕಿನ ಸಾಸಲು ಹೋಬಳಿ ಯ ಮಲ್ಲಸಂದ್ರ ಗ್ರಾಮದಲ್ಲಿ ಭೂಮಿ ಅಳತೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಪರವಾನಗಿ ಪಡೆದ ಖಾಸಗಿ ಭೂ ಮಾಪಕ ಡಿ.ಬಿ.ಗೌಡ ಎಂಬು ವರು ಮಂಗಳವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ದೇವನಹಳ್ಳಿ ತಾಲ್ಲೂಕಿನ ಕುಂದಾಣ ಗ್ರಾಮದ ಲಕ್ಷ್ಮಣ ಎಂಬುವವರು ತಾಲ್ಲೂಕಿನ ಸಾಸಲು ಹೋಬಳಿ ಯ ಮಲ್ಲಸಂದ್ರ ಗ್ರಾಮದಲ್ಲಿ ಭೂಮಿ ಖರೀದಿಸಿದ್ದರು. ಈ ಭೂಮಿಯ ನೋಂದಣಿಗಾಗಿ ತತ್ಕಾಲ್‌ ಯೋಜನೆಯಲ್ಲಿ ಭೂಮಿ ಸರ್ವೇ ಮಾಡಿಕೊಡುವಂತೆ ಸರ್ಕಾರಿ ಶುಲ್ಕ 600 ರೂಪಾಯಿಗಳನ್ನು ಪಾವತಿಸಿ ದ್ದರು. ಆದರೆ ಪರವಾನಗಿ ಪಡೆದ ಖಾಸಗಿ ಭೂ ಮಾಪಕ ಡಿ.ಬಿ.ಗೌಡ 10 ಸಾವಿರ ರೂಪಾಯಿ ನೀಡಿದರೆ ಮಾತ್ರ ಸರ್ವೇ ಮಾಡಿಕೊಡಲು ಸಾಧ್ಯ ಎಂದು ಬೇಡಿಕೆಯಿಟ್ಟಿದ್ದರು. ಜಮೀನು ಖರೀದಿದಾರ ಲಕ್ಷ್ಮಣ ಅಂತಿಮವಾಗಿ ಆರು ಸಾವಿರ ರೂಪಾಯಿ ನೀಡು ವುದಾಗಿ ಒಪ್ಪಿಕೊಂಡಿದ್ದರು. ಅದರನ್ವಯ ಮುಂಗಡ ವಾಗಿ ಮೂರು ಸಾವಿರ ರೂಪಾಯಿ ನೀಡಿದ್ದರು. ಉಳಿದ 3,000 ರೂಪಾಯಿಗಳನ್ನು ನೀಡುವ ಮುನ್ನ ಅವರು ಲೋಕಾಯುಕ್ತ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದರು. ಅದರಂತೆ ಮಂಗಳ ವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಲಕ್ಷ್ಮಣ ಹಣ ನೀಡುವಾಗ ಡಿ.ಬಿ.ಗೌಡ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಸುಬ್ರಹ್ಮಣ್ಯ ಅವರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಬೀಗ ಹಾಕಿದ ಕೊಠಡಿಗಳು: ತಾಲ್ಲೂಕು ಕಚೇರಿಯಲ್ಲಿ ಭೂ ಮಾಪಕ ಡಿ.ಬಿ.ಗೌಡ ಲೋಕಾಯುಕ್ತ ಪೊಲೀಸರ ಬಲೆಗೆ ಬೀಳುತ್ತಿದ್ದ ಸುದ್ದಿ ಹರಡುತ್ತಿದ್ದಂತೆಯೇ ಮಿನಿ ವಿಧಾನ ಸೌಧದಲ್ಲಿನ ಭೂ ದಾಖಲೆಗಳ ಕೊಠಡಿ ಸೇರಿ ದಂತೆ ಕಂದಾಯ ಇಲಾಖೆಯ ವಿವಿಧ ದಾಖಲಾತಿ ಕೊಠಡಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ನೌಕರರು ತಂತಮ್ಮ ಕೊಠಡಿಗಳಿಗೆ ಬೀಗ ಹಾಕಿ ಕ್ಷಣಾರ್ಧದಲ್ಲಿ ಕಣ್ಮರೆಯಾದರು.

ಇದರಿಂದ ವಿವಿಧ ಭೂ ದಾಖಲೆಗಳನ್ನು ಪಡೆಯಲು ಗ್ರಾಮಾಂತರ ಪ್ರದೇಶದಿಂದ ಆಗಮಿಸಿದ್ದ ರೈತರು ಹಾಗೂ ಸಾರ್ವಜನಿಕರು ಪರದಾಡು ವಂತಾಗಿತ್ತು.

‘ತಾಲ್ಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ, ಐಟಿಐಆರ್‌ ಪಾರ್ಕ್‌, ಜವಳಿ ಪಾರ್ಕ್‌ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಸರ್ಕಾರ ಭೂ ಸ್ವಾಧಿನ ಪಡೆದ ನಂತರ  ರೈತರಿಗೆ ಹಳೆಯ ಭೂ ದಾಖಲಾತಿಗಳ ತುರ್ತು ಅಗತ್ಯ ಉಂಟಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಂದಾಯ ಇಲಾಖೆಯ ಭೂ ದಾಖಲಾತಿ ವಿಭಾಗದ ನೌಕರರು ಹಳೆಯ ದಾಖಲೆ ಗಳನ್ನು ನೀಡಲು ರೈತರಿಂದ ದುಬಾರಿ ಹಣ ಪಡೆ ಯುವ ಹಾವಳಿ ಮಿತಿ ಮೀರಿ ಹೋಗಿದೆ ಎಂದು ಬೆಳ ವಗಲ ಗ್ರಾಮದ ರೈತ ರಾಮಕೃಷ್ಣ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.