ADVERTISEMENT

ಗ್ರಾಮ ಪಂಚಾಯಿತಿಗಳ ಮೇಲ್ದರ್ಜೆಗೆ ಪ್ರಸ್ತಾವನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 9:07 IST
Last Updated 5 ಡಿಸೆಂಬರ್ 2013, 9:07 IST

ಆನೇಕಲ್‌: ತಾಲ್ಲೂಕಿನ 18 ಗ್ರಾಮ ಪಂಚಾಯಿತಿಗಳನ್ನು ಪುರಸಭೆಗಳನ್ನಾಗಿ ಪರಿವರ್ತನೆ ಮಾಡಿ ಸರ್ವತೋಮುಖ ಮಾಡಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾ ವನೆ ಸಲ್ಲಿಸಲಾಗಿದೆ ಎಂದು ಸಂಸದ ಡಿ.ಕೆ.ಸುರೇಶ್‌ ನುಡಿದರು.

ಶಿಕಾರಿಪಾಳ್ಯದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.

ಹಲವಾರು ಗ್ರಾಮಗಳು ಕೈಗಾರಿಕೆ ಗಳ ಸಮೀಪದಲ್ಲಿಯೇ ಇದ್ದರೂ ಅಭಿ ವೃದ್ಧಿಯಲ್ಲಿ ತೀರಾ ಹಿಂದುಳಿದಿವೆ. ಹಾಗಾಗಿ ಸರ್ಕಾರದ ಅನುದಾನಗಳ ಜೊತೆಗೆ ಕೈಗಾರಿಕೆಗಳೂ ಕೈಜೋಡಿಸಿ ಗ್ರಾಮಗಳ ಅಭಿವೃದ್ಧಿಗೆ ಮುಂದಾಗ ಬೇಕು ಎಂದರು.

ಸ್ಥಳೀಯರ ಜಮೀನುಗಳನ್ನು ಪಡೆದು ಕೈಗಾರಿಕೆಗಳು ಅಭಿವೃದ್ಧಿ ಹೊಂದಿವೆ. ಆದರೆ ಜಮೀನು ನೀಡಿದ ಗ್ರಾಮಗಳು ಮಾತ್ರ ಮೂಲ ಸೌಕ ರ್ಯಗಳಿಲ್ಲದೇ ಕೊಳಚೆ ಪ್ರದೇಶಗಳಾ ಗಿವೆ. ಹಾಗಾಗಿ ಈ ಗ್ರಾಮಗಳ ಅಭಿ ವೃದ್ಧಿಗಾಗಿ ಕ್ರಿಯಾ ಯೋಜನೆ ತಯಾ ರಿಸಿದ್ದು ಪ್ರಥಮ ಬಾರಿಗೆ 670ಲಕ್ಷ ರೂಪಾಯಿ ವೆಚ್ಚದಲ್ಲಿ ಎಲೆಕ್ಟ್ರಾನಿಕ್‌ ಸಿಟಿ ಕೈಗಾರಿಕಾ ಮಾಲೀ ಕರ ಸಂಘದ ಸಹಕಾರದಿಂದ ಶಿಕಾರಿ ಪಾಳ್ಯದ ಗ್ರಾಮವನ್ನು ಅಭಿವೃದ್ಧಿ ಪಡಿಸಲಾ ಗುವುದು ಎಂದರು.

ಶುದ್ಧ ಕುಡಿಯುವ ನೀರು ಪೂರೈಕೆ ಗಾಗಿ 10 ಪೈಸೆಗೆ 1ಲೀಟರ್‌ನಂತೆ ನೀರು ಪೂರೈಸಲು ಶುದ್ಧೀಕರಣ ಘಟಕ ಸ್ಥಾಪಿಸಲಾಗುವುದು. ಜಿಗಣಿ ಹೋಬಳಿ ಯಲ್ಲಿ 38ಗ್ರಾಮಗಳು ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿವೆ. ಕೈಗಾರಿಕೆ ಗಳು ಲಾಭದ ಶೇ.2ರಷ್ಟನ್ನು ಸೇವಾ ಕಾರ್ಯಗಳಿಗೆ ತೊಡಗಿಸಿ ಕೊಳ್ಳಲು ಅವಕಾಶವಿದೆ. ದತ್ತು ಪಡೆದು ಅಭಿ ವೃದ್ಧಿಪಡಿಸಬೇಕು ಎಂದು ನುಡಿದರು.

ಜಿ.ಪಂ.ಅಧ್ಯಕ್ಷೆ ಇಂದಿರಮ್ಮ ನಾಗ ರಾಜು, ಸದಸ್ಯ ಕೆ.ಸಿ.ರಾಮಚಂದ್ರ, ಬಮೂಲ್‌ ನಿರ್ದೇಶಕ ಆರ್‌.ಕೆ. ರಮೇಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ತಿಮ್ಮಾರೆಡ್ಡಿ, ಮಹಿಳಾ ಕಾಂಗ್ರೆಸ್‌ ರಾಜ್ಯ ಉಪಾಧ್ಯಕ್ಷೆ ಸುಷ್ಮಾ ರಾಜ ಗೋಪಾಲ ರೆಡ್ಡಿ, ಟಿಎಪಿಸಿಎಂಎಸ್‌ ಅಧ್ಯಕ್ಷ ಎನ್‌.ಬಿ.ಐ.ನಾಗರಾಜು, ಕೆಪಿಸಿ ಸಿ ಸದಸ್ಯ ಜಿಗಣಿ ಕೃಷ್ಣಪ್ಪ, ತಾ.ಪಂ. ಸದಸ್ಯ ರಾಮಕುಮಾರ್‌, ಮುಖಂಡ ರಾದ ಪುನೀತ್‌, ರಾಮೋಜಿ ಗೌಡ, ಗಟ್ಟಹಳ್ಳಿ ಸೀನಪ್ಪ, ಆದಿಲ್‌, ಸಯ್ಯದ್‌, ಷರೀಫ್‌, ಅನ್ಸರ್‌, ಜಹೀರ್‌, ತಹಶೀ ಲ್ದಾರ್‌ ಮಲ್ಲಿಕಾ ರ್ಜುನ್‌, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಧಿಕಾರಿ ಡಾ.ಬಿ. ವೀರಭದ್ರಪ್ಪ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.