ADVERTISEMENT

ಟ್ಯಾಂಕರ್‌ ಮೂಲಕ ಪೂರೈಸಲು ತಾಕೀತು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 10:03 IST
Last Updated 23 ಸೆಪ್ಟೆಂಬರ್ 2013, 10:03 IST

ದೊಡ್ಡಬಳ್ಳಾಪುರ: ತೀವ್ರ ನೀರಿನ ಕೊರತೆ ಎದುರಿಸುತ್ತಿರುವ ನಗರದ ಸರ್ಕಾರಿ ಸಾರ್ವಜನಿಕ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಶಾಸಕ ಟಿ.ವೆಂಕಟ ರಮಣಯ್ಯ ಭೇಟಿ ನೀಡಿ ವಿದ್ಯಾರ್ಥಿ ನಿಯರಿಂದ ಮಾಹಿತಿ ಪಡೆದರು.

ವಿದ್ಯಾರ್ಥಿ ನಿಲಯದಲ್ಲಿ  ನೀರು ಇಲ್ಲದಿರುವ ಸಮಸ್ಯೆಯನ್ನು ಮೇಲಾಧಿ ಕಾರಿಗಳ ಗಮನಕ್ಕೆ ತಾರದೇ ಇದ್ದ ವಾರ್ಡ್‌ನ್‌ ವಿರುದ್ಧ ಶಾಸಕರು ತೀವ್ರ ಅಸಮಧಾನ ವ್ಯಕ್ತಪಡಿಸಿದರು.

ಮನೆಗಳಲ್ಲಿ ಒಂದು ದಿನ ನೀರು ಇಲ್ಲದೆ ಇದ್ದರೂ ಬದುಕು ನರಕ ಯಾತನೆ ಆಗುತ್ತದೆ. ಆದರೆ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಾಸ ಮಾಡುತ್ತಿರುವ ಇಲ್ಲಿ ನೀರಿನ ಸಮಸ್ಯೆ ಬಗ್ಗೆ ಕ್ರಮ ಕೈಗೊಳ್ಳದೇ ಇರುವುದು ಖಂಡನೀಯ ಎಂದರು..

’ಸದ್ಯಕ್ಕೆ ಪ್ರತಿದಿನ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು ನಗರ ಸಭೆ ಅಧಿಕಾರಿಗಳು ಸೂಚನೆ ನೀಡಲಾಗಿದೆ. ಒಂದು ವಾರದ ಒಳಗೆ ಶಾಶ್ವತ ನೀರಿನ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಹೇಳಿದರು.

ಶಾಸಕರ ಭೇಟಿಗೂ ಮುನ್ನ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ್ದ ‘ಪ್ರಜಾವಾಣಿ’ಯೊಂದಿಗೆ ತಮ್ಮ ಆಳಲು ತೋಡಿಕೊಂಡ ವಿದ್ಯಾರ್ಥಿನಿಯರು ‘ಕಳೆದ ಒಂದೂವರೆ ತಿಂಗಳಿಂದಲೂ ನೀರಿನ ಕೊರತೆ ಇದೆ. ಅದರಲ್ಲೂ ಮೂರು ದಿನಗಳಿಂದ ಶೌಚಾಲಯ ಬಳಕೆಗೂ ನೀರು ಇಲ್ಲದಂತಾಗಿದೆ

 ಸಮೀಪದಲ್ಲೇ ಇರುವ ತಾಲ್ಲೂಕು ಪಂಚಾಯ್ತಿ ಕಚೇರಿ ಆವರಣ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಡಿಪೋದಲ್ಲಿನ ಕೊಳಾಯಿಗಳಿಂದ ಬಕೆಟ್‌ಗಳಲ್ಲಿ ನೀರು ತಂದು ಮುಖ ತೊಳೆದುಕೊಳ್ಳಲು ಹಾಗೂ ಶೌಚಾಲಯಕ್ಕೆ ಬಳಸಿಕೊಳ್ಳು ತ್ತಿದ್ದೇವೆ. ವಾರಕ್ಕೆ ಎರಡು ದಿನ ಮಾತ್ರ ಸ್ನಾನ ಮಾಡುತ್ತಿದ್ದೇವೆ. ಈ ಬಗ್ಗೆ ಹೊರಗೆಲ್ಲೂ ನಮ್ಮ ಹೇಳಿಕೊಳ್ಳು ವಂತಿಲ್ಲ ಎಂದು ಅಲವತ್ತುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.