ADVERTISEMENT

ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2012, 5:40 IST
Last Updated 23 ಆಗಸ್ಟ್ 2012, 5:40 IST

ವಿಜಯಪುರ: 2012-13ನೇ ಸಾಲಿನ ಹೋಬಳಿ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಪಟ್ಟಣ ಸಮೀಪದ ಯಲಿಯೂರು ಸರ್ಕಾರಿ ಪ್ರೌಢಶಾಲಾ ಮಕ್ಕಳು ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಮಧು.ಟಿ.ಎ. ಉದ್ದ ಜಿಗಿತ ಪ್ರಥಮ, 4ಗಿ100 ರಿಲೆ ದ್ವಿತೀಯ, 100 ಮೀ. ಮತ್ತು 800 ಮೀ ಓಟ ತೃತೀಯ ಸ್ಥಾನ, ಶಶಿಕುಮಾರ್ 200 ಮೀ. ಓಟ ಮತ್ತು ತಟ್ಟೆ ಎಸೆತ ಪ್ರಥಮ, 4ಗಿ100 ರಿಲೆ ದ್ವಿತೀಯ, ಪದ್ಮಾ ಎತ್ತರ ಜಿಗಿತ ಪ್ರಥಮ, ಎಂ. ಸಿ. ಸುಷ್ಮಾ ಉದ್ದ ಜಿಗಿತ ಮತ್ತು 4ಗಿ100 ರಿಲೆ ಪ್ರಥಮ,  ಎಂ. ಆರ್. ಚೈತ್ರಾ 400 ಮೀ ಓಟ ಪ್ರಥಮ, ವೈ.ಕೆ. ಕುಸುಮಾ ಜಾವಲಿನ್ ಎಸೆತ ಪ್ರಥಮ, ಛಾಯಾ ವೈ.ಎನ್. 800 ಮತ್ತು 1500 ಮೀ. ಓಟ ಪ್ರಥಮ, ಅಂಬುಜಾ ಬಿ.ಆರ್.100ಮೀ ಓಟ ಮತ್ತು 4ಗಿ100 ರಿಲೆ ಪ್ರಥಮ, ವೀಣಾ  400 ಮೀ ಓಟ ದ್ವಿತೀಯ ಮತ್ತು  4ಗಿ100 ರಿಲೆ ಪ್ರಥಮ,  ಪದ್ಮಾ ಎ.ಆರ್. 4ಗಿ100 ರಿಲೆ ಪ್ರಥಮ, 800 ಮೀ ಓಟ ದ್ವಿತೀಯ, ಅಮರ್ ಆರ್. 4ಗಿ100 ರಿಲೆ ದ್ವಿತೀಯ, ಉಮ್ಮೀದ್ 4ಗಿ100 ರಿಲೆ ದ್ವಿತೀಯ,  ಡಿ.ಎಸ್. ಅಮೃತಾ ಜಾವಲಿನ್ ಎಸೆತ ತೃತೀಯ, ವೈ.ಎಂ. ತೇಜ 1500 ಮೀ ಓಟ ತೃತೀಯ, ಶ್ವೇತಾ 2000 ಮೀ ಓಟ  ತೃತೀಯ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಗುಂಪು ಆಟಗಳಲ್ಲಿ ಬಾಲಕಿಯರ ವಿಭಾಗದಲ್ಲಿ ಕೊಕ್ಕೋ ಪ್ರಥಮ ಹಾಗೂ ವಾಲಿಬಾಲ್ ದ್ವಿತೀಯ, ಬಾಲಕರ ವಿಭಾಗದಲ್ಲಿ ಕೊಕ್ಕೋ ದ್ವಿತೀಯ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿಜೇತ ಮಕ್ಕಳನ್ನು ಶಾಲಾ ಮುಖ್ಯ ಶಿಕ್ಷಕ ಹೊನ್ನಪ್ಪ, ಚಿತ್ರಕಲಾ ಶಿಕ್ಷಕ ವಿ.ಜಿ.ಹೂಗಾರ್ ಮತ್ತು ಶಿಕ್ಷಕ ವರ್ಗದವರು ಅಭಿನಂದಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.