ADVERTISEMENT

ದುಷ್ಟಶಕ್ತಿ ನಿವಾರಣೆಗೆ ಅಂತರಂಗದ ಯಜ್ಞ

ಶ್ರೀಶೈಲದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶ್ರೀಗಳ ಅಭಿಮತ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 10:05 IST
Last Updated 10 ಡಿಸೆಂಬರ್ 2013, 10:05 IST

ಆನೇಕಲ್‌: ಮಾನವ ತನ್ನಲ್ಲಿರುವ ದುಷ್ಟ ಶಕ್ತಿಗಳನ್ನು ನಿವಾರಿಸಿಕೊಳ್ಳಲು ಅಂತ ರಂಗದ ಯಜ್ಞ ಮಾಡಬೇಕು. ಜ್ಞಾನ ವೆಂಬ ಹವಿಸ್ಸನ್ನು ಯಜ್ಞಕ್ಕೆ ಹಾಕುವ ಮೂಲಕ ಆತ್ಮ ಜ್ಯೋತಿಯನ್ನು ಬೆಳಗಿ ಸಬೇಕು ಎಂದು ಶ್ರೀಶೈಲದ ಡಾ.ಚನ್ನಸಿ ದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ನುಡಿದರು.

ಅವರು ತಾಲ್ಲೂಕಿನ ರಾಜಾಪುರದಲ್ಲಿ ರಾಜಾಪುರ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ದ್ವಾದಶ ಪಟ್ಟಾಧಿಕಾರ ವರ್ಧಂತಿ ಮಹೋತ್ಸವದ ಮುಕ್ತಾಯ ಸಮಾರಂಭದಲ್ಲಿ ಪಾಲ್ಗೊಂಡು ಮಾತ ನಾಡಿದರು.

ಸಮಾಜದಲ್ಲಿ ನಡೆಯುತ್ತಿರುವ ಅವ ಘಡಗಳಿಗೆ ಕಾರಣ ಅಹಂಕಾರ ಮತ್ತು ಮಮಕಾರ. ಇವುಗಳನ್ನು ನಿವಾರಣೆ ಮಾಡಿ ಕೊಂಡು ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಬೇಕು. ಈ ಕಾರ್ಯ ದಲ್ಲಿ ಮಠ ಮಾನ್ಯಗಳು ಜನರಲ್ಲಿ ಜಾಗೃತಿ ಮೂಡಿಸಬೇಕು ಇದೇ ಯಜ್ಞ, ಪೂಜೆ ಎಂದು ಶ್ರೀಗಳು ನುಡಿದರು.

ಉಜ್ಜಯಿನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶ್ರೀಗಳು ಮಾತನಾಡಿ, ’ಮಾನವ ತನಗೆ ಕೇಡನ್ನು ಬಗೆದವರಿಗೂ ಸಹ ಒಳಿತನ್ನು ಮಾಡುವ ಮಹಾ ಮಾನವನಾಗಬೇಕು’ ಎಂದರು.

ಇತ್ತೀಚಿನ ದಿನಗಳಲ್ಲಿ ತಂದೆ ತಾಯಿಗಳ ಬಗ್ಗೆ ಪ್ರೀತಿ, ಗುರು ಹಿರಿಯರ ಬಗ್ಗೆ ಗೌರವ ಕಡಿಮೆಯಾಗುತ್ತಿದೆ. ವೃದ್ಧಾ ಶ್ರಮಗಳು ಹೆಚ್ಚಾಗುತ್ತಿರುವುದು ಆತಂಕ ಕಾರಿ ವಿಷಯವಾಗಿದೆ ಎಂದರು.

ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜ್ಞಾನ ಅತ್ಯಂತ ಶ್ರೇಷ್ಠವಾದುದು. ಉನ್ನತ ಜ್ಞಾನವನ್ನು ಪಡೆಯಲು ಸತತ ಅಧ್ಯಯನ, ಅಭ್ಯಾಸದ ಅವಶ್ಯಕತೆಯಿದೆ ಎಂದರು.

ಮಹರ್ಷಿ ಡಾ.ಆನಂದ್‌ ಗುರೂಜಿ ಮಾತನಾಡಿ  ಆದರ್ಶಗಳು ನಮ್ಮ ನಡೆ ನುಡಿಯಲ್ಲಿ ಹಾಸುಹೊಕ್ಕಾಗಿರಬೇಕು ಎಂದರು.

ರಾಜಾಪುರ ರಾಜೇಶ್ವರ ಶಿವಾ ಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿ ದ್ದರು. ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ, ಬೆಂಗಳೂರು ಕೊಳದ ಮಠದ ಡಾ.ಶಾಂತವೀರ  ಸ್ವಾಮೀಜಿ, ನಾಗಾಲಾ ಪುರ ಶ್ರೀಗಳು, ಗುಮ್ಮಳಾ ಪುರ ಶ್ರೀಗಳು ಸೇರಿದಂತೆ ಹಲವಾರು  ಮಠಾಧೀಶರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್‌.ಎಸ್‌.ಬಸವ ರಾಜು, ಮಾಸ್ತೇನ ಹಳ್ಳಿ ವೀರಭದ್ರ ಸ್ವಾಮಿ ದೇವಾಲಯ ಟ್ರಸ್‌್ಟ ಅಧ್ಯಕ್ಷ ಕೋವಾ ರೇವಣ್ಣ, ಬಮೂಲ್‌ ನಿರ್ದೇ ಶಕ ಆರ್‌.ಕೆ. ರಮೇಶ್‌, ಹಾಪ್‌ಕಾಮ್‌್ಸ ನಿರ್ದೇಶಕ ಎಂ.ಬಾಬು, ಹೆನ್ನಾಗರ ಗ್ರಾಪಂ ಅಧ್ಯಕ್ಷ ಕೇಶವರೆಡ್ಡಿ, ಮಾಜಿ ಅಧ್ಯಕ್ಷ ಪ್ರಸನ್ನ ಕುಮಾರ್‌, ಹಾರಗದ್ದೆ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಎಸ್‌.ನಟ ರಾಜ್‌, ವಿಶ್ವ ವೀರಶೈವ ವೇದಿಕೆಯ ಅಧ್ಯಕ್ಷ ಸಿ.ನಟ ರಾಜ್‌, ಸಿ.ವಿಶ್ವನಾಥ್‌, ಮುಖಂಡರಾದ ಕೆ.ಜಯಣ್ಣ, ಚಿಕ್ಕರೇ ವಣ್ಣ, ಆರ್‌.ಎಸ್‌. ಪ್ರಕಾಶ್‌, ಉಪ ನ್ಯಾಸಕ ಶಿವಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.