ADVERTISEMENT

ದೇವನಹಳ್ಳಿಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2016, 11:47 IST
Last Updated 16 ಆಗಸ್ಟ್ 2016, 11:47 IST
ದೇವನಹಳ್ಳಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು
ದೇವನಹಳ್ಳಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು   

ದೇವನಹಳ್ಳಿ : ದೇಶದಲ್ಲಿ 350 ವರ್ಷಗಳ ಕಾಲ ದಬ್ಬಾಳಿಕೆ ನಡೆಸಿದ ಬ್ರಿಟೀಷರ ವಿರುದ್ಧ190 ವರ್ಷಗಳ ಹೋರಾಟದ ಫಲವಾಗಿ ಸ್ವಾತಂತ್ರ್ಯ ಸಂದಿದೆ. ಹೀಗಾಗಿ ಈ ನೆಲದ ಋಣವನ್ನು ತೀರಿಸುವ ಸಂಕಲ್ಪವನ್ನು ಯುವಶಕ್ತಿ ಮಾಡಬೇಕಿದೆ ಎಂದು ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ತಿಳಿಸಿದರು.

ದೇವನಹಳ್ಳಿ ಸರ್ಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ 70 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

123 ಕೋಟಿ ಜನಸಂಖ್ಯೆ ಹೊಂದಿರುವ ದೇಶದ ಗಡಿ ಭಾಗದಲ್ಲಿ ಉಗ್ರರ ನುಸುಳುವಿಕೆಯನ್ನು ತಡೆಗಟ್ಟಲು ಪ್ರತಿನಿತ್ಯ ಗಡಿಕಾಯುವ ಯೋಧರು ಜೀವದ ಹಂಗು ತೊರೆದು ಕಾಯುತ್ತಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿ ಮಾತನಾಡಿ, ಸ್ವಾತಂತ್ರ್ಯ  ಪಡೆಯಲು ಅನೇಕ ಮಹಾನ್‌ ನಾಯಕರ  ಸಾರ್ಥಕ ಹೋರಾಟದಿಂದ ನಾವು ಬಂಧಮುಕ್ತರಾಗಿದ್ದೇವೆ ಎಂದರು.

ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ರಕ್ತ ಹರಿಸಿ ಸ್ವಾತಂತ್ರ್ಯ  ಪಡೆದ ದೇಶದಲ್ಲಿ ಶೇಕಡ 20 ರಷ್ಟು ಜನರಿಗೆ ಅನ್ನ ನೀರಿಲ್ಲ. ಪರಕೀಯರ ದಬ್ಬಾಳಿಕೆಯಿಂದ ನಲುಗಿದ ದೇಶದಲ್ಲಿ ಬಡತನ ಸಂಪೂರ್ಣ ನಿರ್ಮೂಲನೆಯಾಗಿಲ್ಲ ಎಂದು ವಿಷಾದಿಸಿದರು.

‘ಹಾಪ್‌ಕಾಮ್ಸ್’ ಉಪಾಧ್ಯಕ್ಷ ಬಿ.ಮುನೇಗೌಡ,ಜಿ.ಪಂ ಸದಸ್ಯ ಕೆ.ಸಿ.ಮಂಜುನಾಥ್‌, ತಾ.ಪಂ ಅಧ್ಯಕ್ಷೆ ಭಾರತಿ ಲಕ್ಷ್ಮಣಗೌಡ, ‘ಬಮುಲ್‌’ ನಿರ್ದೇಶಕ ಶ್ರೀನಿವಾಸ್‌ ಮಾತನಾಡಿದರು.

ತಾ.ಪಂ ಉಪಾಧ್ಯಕ್ಷೆ ನಂದಿನಿ, ಪುರಸಭೆ ಅಧ್ಯಕ್ಷೆ ಶಾರದಮ್ಮ, ಉಪಾಧ್ಯಕ್ಷೆ ಗಾಯಿತ್ರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬೇಕರಿ ಮಂಜುನಾಥ್, ಮುಖ್ಯಾಧಿಕಾರಿ ಅಂಬಿಕಾ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸಮೂರ್ತಿ, ಸಹಾಯಕ ಪೊಲೀಸ್‌ ಆಯುಕ್ತ ಪಿ.ಶಿವಕುಮಾರ್‌, ಡಿ.ಸಿ.ಸಿ ಬ್ಯಾಂಕ್‌ ಅಧ್ಯಕ್ಷ ಎ.ಸಿ.ನಾಗರಾಜ್‌, ನಿರ್ದೇಶಕ ಸೊಣ್ಣಪ್ಪ, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ರವಿಕುಮಾರ್‌, ತಾಲ್ಲೂಕು ಅಧ್ಯಕ್ಷ ಶ್ರೀನಿವಾಸಗೌಡ, ‘ಹಾಪ್‌ಕಾಮ್ಸ್’ ನಿರ್ದೇಶಕ ಹುರುಳಗುರ್ಕಿ ಶ್ರೀನಿವಾಸ್‌ ಮತ್ತು ನಂಜಪ್ಪ, ಜಿ.ಪಂ ಸದಸ್ಯೆ ರಾಧಮ್ಮ ಮುನಿರಾಜು ಉಪಸ್ಥಿತರಿದ್ದರು.

ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಾದ ‘ಬೆಸ್ಕಾಂ’ ಮಾರ್ಗಾಧಿಕಾರಿ ಶಿವಣ್ಣ, ಅಂಗನವಾಡಿ ಕಾರ್ಯಕರ್ತೆ ರತ್ನಮ್ಮ, ನಿವೃತ್ತ ದೈಹಿಕ ಶಿಕ್ಷಕ ಎಲ್‌ಎಸ್‌ ಚಂದ್ರಪ್ಪ, ಸರ್ಕಾರಿ ಆಸ್ಪತ್ರೆ ವೈದ್ಯೆ ಡಾ.ಶ್ರೀನಿವಾಸ್‌, ಸಾವಯುವ ಕೃಷಿಕ ಡಿ.ಎಂ.ರಾಮಾಂಜಿನಪ್ಪ ಶಾಶ್ವತ ನೀರಾವರಿ ಹೋರಾಟಗಾರ ಕಲ್ಯಾಣ್‌ ಕುಮಾರ್‌ ಬಾಬು, ಸಂಗೀತ ನಿರ್ದೇಶಕ ಗೋಪಾಲ್‌, ಪೌರ ಕಾರ್ಮಿಕ ಮಹಿಳೆ ಆಂಜಿನಮ್ಮ ಅವರನ್ನು ಸನ್ಮಾನಿಸಲಾಯಿತು.

ವಿವಿಧೆಡೆ ದಿನಾಚರಣೆ:  ಪಟ್ಟಣದ ಪೊಲೀಸ್‌ ಠಾಣೆ ಆವರಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಎಸಿಪಿ ಶಿವಕುಮಾರ್‌ ಧ್ವಜಾರೋಹಣ ನೆರವೇರಿಸಿದರು. ಪೊಲೀಸ್‌ ಇನ್ಸ್‌ಪೆಕ್ಟರ್‌ ಪಿ.ಶಿವಸ್ವಾಮಿ, ಪಿಎಸ್‌ಐ ಗಂಗರುದ್ರಯ್ಯ ಸೇರಿದಂತೆ ಸಿಬ್ಬಂದಿ ಇದ್ದರು.

ಪಟ್ಟಣದ ಸಂಚಾರ ಪೊಲೀಸ್‌ ಠಾಣೆ ಆವರಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಿಐ ಮಹೇಶ್‌ ಕುಮಾರ್‌ ಧ್ವಜಾರೋಹಣ ನೆರವೇರಿಸಿದರು.
ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ತಾ.ಪಂ ಅದ್ಯಕ್ಷೆ ಭಾರತಿ ಲಕ್ಷ್ಮಣಗೌಡ ಧ್ವಜಾರೋಹಣ ನೆರವೇರಿಸಿದರು. ತಾ.ಪಂ ಉಪಾಧ್ಯಕ್ಷೆ ನಂದಿನಿ, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸಮೂರ್ತಿ ಉಪಸ್ಥಿತರಿದ್ದರು.

ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ಆವರಣದಲ್ಲಿ ಎಆರ್‌ಟಿಒ.  ಟಿ.ತಿಮ್ಮರಾಯಪ್ಪ ಧ್ವಜಾರೋಹಣ ಮಾಡಿದರು.
ಪಟ್ಟಣದ ಆಕಾಶ್‌ ಇಂಟರ್‌ ನ್ಯಾಷನಲ್‌ ಶಾಲೆ ಆವರಣದಲ್ಲಿ ಆಡಳಿತ ಮಂಡಳಿ ಅಧ್ಯಕ್ಷೆ ಪುಷ್ಪ ಮುನಿರಾಜು ಧ್ವಜಾರೋಹಣ ನೆರವೇರಿಸಿದರು. ಆಡಳಿತ ಮಂಡಳಿ ನಿರ್ದೇಶಕ ಪ್ರಭಾಕರ್‌, ಕೃಷ್ಣಮೂರ್ತಿ, ಆಕಾಶ್‌ ಆಸ್ಪತ್ರೆ ಆಡಳಿತ ಮಂಡಳಿ ನಿರ್ದೇಶಕ ಡಾ.ಸತೀಶ್‌ಬಾಬು ಉಪಸ್ಥಿತರಿದ್ದರು.

ತಾಲ್ಲೂಕಿನ ಕನ್ನಮಂಗಲ ಗ್ರಾಮ ಪಂಚಾಯಿತಿಯಲ್ಲಿ ಗ್ರಾ.ಪಂ ಅಧ್ಯಕ್ಷೆ ಲೀಲಾವತಿ ಉಪಾಧ್ಯಕ್ಷೆ ಸರಸ್ವತಿ ಮಂಜುನಾಥ್‌, ಜಿ.ಪಂ ಸದಸ್ಯ ಕೆ.ಸಿ.ಮಂಜುನಾಥ್‌ ಪುಷ್ಪನಮನ ಸಲ್ಲಿಸಿದರು. ಸದಸ್ಯ ಲಕ್ಷ್ಮಿಕಾಂತ್‌, ಮಂಜುನಾಥ್, ನಾಗೇಶ್‌, ನಜೀರ್‌ ಸಾಬ್‌ ಇಂದ್ರಾಣಿ, ಜಯಮ್ಮ, ಸೋಮಶೇಖರ್‌, ಚನ್ನಕೇಶವ, ನೇತ್ರಾವತಿ, ಪಿಡಿಒ ಶ್ರೀನಿವಾಸ್‌, ತಾ.ಪಂ ಸದಸ್ಯ ಮಹೇಶ್‌, ಜಯಂತಿ, ಆಶಾದಾಸ್‌, ಮಾಲತಿ ಉಪಸ್ಥಿತರಿದ್ದರು.

ಕೊಯಿರಾ ಸರ್ಕಾರಿ  ಪ್ರೌಢಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಕೆ.ಸಿ.ಮುನಿರಾಜು ಧ್ವಜಾರೋಹಣ ಮಾಡಿದರು, ಗ್ರಾ.ಪಂ ಅಧ್ಯಕ್ಷ ಕೆ.ಎ.ಶ್ರೀನಿವಾಸ್‌, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹೆಚ್‌.ಎಂ.ರವಿಕುಮಾರ್‌, ಮಾಜಿ ಅಧ್ಯಕ್ಷ ರಮೇಶ್‌ ಬಾಬು, ಎಪಿಎಂಸಿ ನಿರ್ದೇಶಕ ಆರ್‌.ಕೆ ನಂಜೇಗೌಡ, ಸಿ.ದೇವರಾಜ್‌, ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.