ADVERTISEMENT

ನಟ ಉದಯ್‌ ಕುಮಾರ್‌ ಜನ್ಮದಿನಾಚರಣೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 6:43 IST
Last Updated 7 ಮಾರ್ಚ್ 2014, 6:43 IST

ಆನೇಕಲ್‌: ಕಲಾವಿದನೊಬ್ಬ ನಾಯಕ­ನಟ­ನಾಗಿ ತನ್ನ ಸ್ಥಾನವನ್ನು ಭದ್ರ­ಪಡಿಸಿಕೊಳ್ಳಬೇಕಾದರೆ ಅವನ ಗುಣ ಹಾಗೂ ಅಭಿನಯದಿಂದ ಮಾತ್ರವೇ ಸಾಧ್ಯ ಎಂದು ಹಿರಿಯ ನಟ ರಾಜೇಶ್‌ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಪವನಸುತ ಕೇಸರಿ ಕಲಾ ಶಾಲೆಯ ವತಿಯಿಂದ ನಟ ದಿವಂಗತ ಉದಯ್‌ ಕುಮಾರ್‌ ಅವರ 81ನೇ ಜನ್ಮದಿನಾಚರಣೆ ಅಂಗವಾಗಿ ಏರ್ಪ­ಡಿಸಿದ್ದ ‘ಕಲಾ ಕೇಸರಿ ಒಂದು ನೆನಪು’ ಕಾರ್ಯ­ಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕನ್ನಡ ಚಲನಚಿತ್ರ ರಂಗದ ಕುಮಾರತ್ರಯರಲ್ಲಿ ಒಬ್ಬರಾಗಿದ್ದ ಉದ­ಯ್‌­­ಕುಮಾರ್‌ ಅವರು ಉತ್ತಮ ವ್ಯಕ್ತಿತ್ವ­ವನ್ನು ಹೊಂದಿದ್ದರು. ಅವರ ನೆನಪು ಅಜರಾಮರ ಎಂದರು.

ಚಲನಚಿತ್ರ ನಿರ್ದೇಶಕ ಸಿ.ವಿ.ಶಿವ­ಶಂಕರ್‌ ಮಾತನಾಡಿ, ‘ಕಲಾವಿದನಿಗೆ ಸಾವಿಲ್ಲ ಎಂಬ ಮಾತಿನಂತೆ ಉದಯ­ಕುಮಾರ್‌ ಅವರ ಚಿತ್ರಗಳು ಅಮರ­ವಾಗಿವೆ’ ಎಂದರು.

ಕಾರ್ಯ­ಕ್ರಮದ ಆಯೋಜಕ ಹಾಗೂ ಉದಯ್‌ಕುಮಾರ್‌ ಪುತ್ರ ವಿಕ್ರಂ ಉದಯ್‌ಕುಮಾರ್‌ ಮಾತನಾಡಿ 190 ಚಿತ್ರಗಳಲ್ಲಿ ನಟಿಸಿದ್ದ ಉದಯ್‌­ಕುಮಾರ್‌ ಅವರು ಸಂಭಾಷಣೆ, ನಿರ್ದೇ­ಶನ, ಸಂಗೀತ  ಸಂಯೋಜನೆ, ನಿರ್ಮಾ­ಪಕ­ರಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರ ನೆನಪು ಶಾಶ್ವತವಾಗಿ ಉಳಿ­ಯು­ವಂತಾ­ಗಲು ಉದಯ್‌­ಕುಮಾರ್‌ ಬಗೆ­ಗಿನ ಸಾಕ್ಷ್ಯಚಿತ್ರ ತಯಾರಿಸಲಾಗಿದೆ’ ಎಂದು ತಿಳಿಸಿದರು.

ಸಂಗೀತ ವಿದ್ವಾಂಸ ವೆಂಕಟ­ರಾಘ­ವನ್‌, ರಾಜಾಪುರ ಸಂಸ್ಥಾನ ಮಠದ ರಾಜೇ­ಶ್ವರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಬಿ.ಶಿವಣ್ಣ, ಮಾಜಿ ಸಚಿವ ಎ.ನಾರಾ­ಯಣ ಸ್ವಾಮಿ, ಖೋಡೇಸ್‌ ಗ್ರೂಪ್‌ನ ನಿರ್ದೇಶಕ ಹರಿ ಖೋಡೆ, ಚಿತ್ರ ನಿರ್ದೇ­ಶಕ ಕೆ.ಎಸ್‌.­ಎಲ್‌.ಸ್ವಾಮಿ, ಸಾಹಿತಿ ತಾ.ನಂ.­ಕುಮಾರಸ್ವಾಮಿ, ಆದೂರು ಪ್ರಕಾಶ್‌, ಮೋಹನ್‌ ಕುಮಾರ್‌ ಕದಂ, ಜಿ.ವೆಂಕಟೇಶ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.