ADVERTISEMENT

ಪಕ್ಷ ಸಂಘಟನೆಗೆ ಬೂತ್‌ಮಟ್ಟದ ಅಭಿಯಾನ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2011, 19:30 IST
Last Updated 15 ಏಪ್ರಿಲ್ 2011, 19:30 IST
ಪಕ್ಷ ಸಂಘಟನೆಗೆ ಬೂತ್‌ಮಟ್ಟದ ಅಭಿಯಾನ
ಪಕ್ಷ ಸಂಘಟನೆಗೆ ಬೂತ್‌ಮಟ್ಟದ ಅಭಿಯಾನ   

ಆನೇಕಲ್ : ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಸಲುವಾಗಿ ಬೂತ್‌ಮಟ್ಟದಿಂದ ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಪ್ರಾರಂಭಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ನುಡಿದರು.  ತಾಲ್ಲೂಕಿನ ಹಾರಗದ್ದೆಯಲ್ಲಿ ಆನೇಕಲ್‌ನಗರ, ಗ್ರಾಮಾಂತರ ಹಾಗೂ ಜಿಗಣಿ ಬ್ಲಾಕ್ ಯವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ರಾಜೀವ್‌ಗಾಂಧಿ ಅವರು 18 ವರ್ಷದ ಯುವಕರಿಗೆ ಮತದಾನದ ಹಕ್ಕು ನೀಡುವ ಮೂಲಕ ಯುವ ಶಕ್ತಿಗೆ ಅಧಿಕಾರದಲ್ಲಿ ಹಕ್ಕು ಚಲಾಯಿಸಲು ಅವಕಾಶ ನೀಡಿದರು.ರಾಹುಲ್ ಗಾಂಧಿ ಅವರು ಯುವ ಕಾಂಗ್ರೆಸ್ ಸಂಘಟನೆಗಾಗಿ ರಾಷ್ಟ್ರಾದ್ಯಂತ ಅಭಿಯಾನ ಕೈಗೊಂಡಿತು. ಯುವ ಕಾಂಗ್ರೆಸ್ ಪದಾಧಿಕಾರಿಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡಲು ಕ್ರಮ ಕೈಗೊಂಡಿದ್ದಾರೆ. ಯುವ ಶಕ್ತಿಯ ಮೇಲೆ ನಂಬಿಕೆಯಿಟ್ಟು ಅವರಿಗೆ ಅವಕಾಶಗಳನ್ನು ಕಲ್ಪಿಸಿಕೊಡಲು ಪಕ್ಷವು ತೀರ್ಮಾನ ಕೈಗೊಂಡಿದೆ ಎಂದರು. ರಾಜಕಾರಣ ವ್ಯವಸಾಯವಿದ್ದಂತೆ ಕಾಲಕಾಲಕ್ಕೆ ಮಾಡಬೇಕಾದ ಕೆಲಸಗಳನ್ನು ಶ್ರದ್ಧೆಯಿಂದ ನಿರ್ವಹಿಸಿದರೆ ಮಾತ್ರ ಫಸಲು ಬರುತ್ತದೆ. ಹಾಗೆಯೇ ಪಕ್ಷದ ಎಲ್ಲಾ ಹಂತಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡರೆ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯ ಎಂದರು.

ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ ಪಕ್ಷದ ಯುವ ಕಾರ್ಯಕರ್ತರು ಸದಸ್ಯತ್ವ ಅಭಿಯಾನದಲ್ಲಿ ತೊಡಗಿಸಿಕೊಂಡು ಸದಸ್ಯರಾಗಬೇಕು. ಯುವ ಶಕ್ತಿ ಎಲ್ಲಾ ಪಕ್ಷಗಳ ಶಕ್ತಿ ಕೇಂದ್ರ ಯುವಕರನ್ನು ನಿರ್ಲಕ್ಷಿಸಿದರೆ ಎಂದಿಗೂ ಪಕ್ಷದ ಸಂಘಟನೆ ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷವು ಯುವಕರಿಗೆ ಜವಾಬ್ದಾರಿಗಳನ್ನು ನೀಡಲು ತೀರ್ಮಾನ ಕೈಗೊಂಡು ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಪ್ರಾರಂಭಿಸಿದೆ ಎಲ್ಲಾ ಹಂತದ ಮುಖಂಡರು ಈ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕು ಎಂದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಯುವ ಕಾಂಗ್ರೆಸ್ ಚುನಾವಣಾಧಿಕಾರಿ ಷೂಜಾಗಾಂಧಿ ಮಾತನಾಡಿ ಯುವ ಕಾಂಗ್ರೆಸ್‌ನಲ್ಲಿ ಸದಸ್ಯತ್ವಕ್ಕೆ ಮುಕ್ತ ಅವಕಾಶ ನೀಡಲಾಗಿದೆ. ಬೇರೆ ಪಕ್ಷದಿಂದ ಸದಸ್ಯರಾಗಲು ಆಸಕ್ತಿ ಹೊಂದಿ ಅರ್ಜಿ ಸಲ್ಲಿಸಿದರೆ ಅವುಗಳನ್ನು ಸಹ ಮಾನ್ಯ ಮಾಡಲಾಗುವುದು.  ವಯಸ್ಸಿನ ದಾಖಲಾತಿ, ವಾಸ ಹಾಗೂ ಇತರ ಮಾಹಿತಿಗಳನ್ನು ಸದಸ್ಯರಾಗುವರು ಸಲ್ಲಿಸಬೇಕಾಗುತ್ತದೆ. ಈ ತಿಂಗಳ 25ರೊಳಗೆ ಅರ್ಜಿಗಳನ್ನು ಸಲ್ಲಿಸಿದರೆ ಮಾತ್ರ ಸದಸ್ಯತ್ವಕ್ಕೆ ಪರಿಗಣಿಸಲಾಗುವುದು
ಎಂದರು.

ವಿಧಾನ ಪರಿಷತ್ ಸದಸ್ಯ ಬಿ.ಟಿ.ದಯಾನಂದರೆಡ್ಡಿ, ಲೋಕಸಭಾ ಮಾಜಿ ಸದಸ್ಯೆ ತೇಜಸ್ವಿನಿ ಗೌಡ ಕೆ.ಪಿ.ಸಿ.ಸಿ ಸದಸ್ಯರಾದ ಬಿ.ಶಿವಣ್ಣ, ಜಿಗಣಿ ಕೃಷ್ಣಪ್ಪ ಜಿ.ಪಂ ಮಾಜಿ ಅಧ್ಯಕ್ಷ ಹೆಚ್.ಎಸ್.ಬಸವರಾಜು, ಬಮೂಲ್ ನಿರ್ದೇಶಕ ಆರ್.ಕೆ.ರಮೇಶ್, ಕಾಂಗ್ರೆಸ್ ಮುಖಂಡ ಹೆಚ್.ಪಿ.ರಾಜಗೋಪಾಲರೆಡ್ಡಿ, ಸದಾನಂದ, ಹಾಪ್‌ಕಾಮ್ಸ್ ನಿರ್ದೇಶಕ ಎಂ.ಬಾಬು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಸಿ.ರಾಮಚಂದ್ರ, ಗೋಪಾಲಕೃಷ್ಣ, ವೈ ಶ್ರೀರಾಮಲು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎನ್.ಬಿ.ಐ ನಾಗರಾಜು, ಚಂದ್ರಪ್ಪ, ಶ್ರೀನಿವಾಸಾಚಾರ್, ಸಿ.ಕೆ.ಚಿನ್ನಪ್ಪ, ಸತ್ಯಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷರಾದ ನರೇಂದ್ರಕುಮಾರ್, ಅನಿಲ್, ಕೇಶವರೆಡ್ಡಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.