ADVERTISEMENT

ಪಠ್ಯೇತರ ಚಟುವಟಿಕೆಗಳು ವಿದ್ಯಾಭ್ಯಾಸಕ್ಕೆ ಪೂರಕ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 19:30 IST
Last Updated 10 ಫೆಬ್ರುವರಿ 2011, 19:30 IST

ದೊಡ್ಡಬಳ್ಳಾಪುರ: ಪಠ್ಯೇತರ ಚಟುವಟಿಕೆಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಲಿವೆ. ಸಾಧನೆಗೆ ಛಲ, ಆತ್ಮವಿಶ್ವಾಸ ಮುಖ್ಯ ಎಂದು ಜವಾಹರ್ ನವೋದಯ ಶಾಲೆ ಉಪಪ್ರಾಂಶುಪಾಲ ರಾಜೇಂದ್ರನ್ ತಿಳಿಸಿದರು. ನಗರದ ಹೊರವಲಯದ ಬಾಶೆಟ್ಟಿಹಳ್ಳಿಯ ನಿಕಿಲಾ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ವಾರ್ಷಿಕ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಪ್ರಗತಿಗೆ ವಿದ್ಯಾ ಸಂಸ್ಥೆ ಆಡಳಿತ ಮಂಡಳಿ ಸಹಕಾರ ಹಾಗೂ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಶಿಕ್ಷಕರು ಪಠ್ಯೇತರ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಸಿದಾಗ ಮಾತ್ರ ವಿದ್ಯಾರ್ಥಿಗಲ್ಲಿ ಸೃಜನಶೀಲತೆ ಬೆಳೆಯಲು ಸಾಧ್ಯ ಎಂದು ಹೇಳಿದರು. ನಿಕಿಲಾ ವಿದ್ಯಾನಿಕೇತನ ಸಂಸ್ಥೆ ಕಾರ್ಯದರ್ಶಿ ಶರಾವತಿ ಮಾತನಾಡಿ, ನಮ್ಮ ಆಲೋಚನೆಗಳು ಒಳ್ಳೆಯದ್ದಾಗಿದ್ದರೆ ಹೊಸತನ ಬೆಳೆಯುತ್ತದೆ. ವಿಷಯಗಳನ್ನು ಮಕ್ಕಳಿಗೆ ತಿಳಿಸುವಾಗ ಅದನ್ನು ಹೇಳುವ ರೀತಿ ಮತ್ತು ಪ್ರದರ್ಶಿಸುವ ರೀತಿ ಹೊಸತನದಿಂದ ಕೂಡಿದ್ದರೆ ಮಕ್ಕಳನ್ನು ಆಕರ್ಷಿಸಬಹುದು ಎಂದು ಹೇಳಿದರು.

ರಾಜ್ಯ ಪಠ್ಯಕ್ರಮದಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ತಾಲ್ಲೂಕಿನ ಯಾವುದೇ ಶಾಲೆ ವಿದ್ಯಾರ್ಥಿ ಪ್ರಥಮ ಸ್ಥಾನ ಪಡೆದರೆ ರೂ 5,000, ದ್ವಿತಿಯ ಸ್ಥಾನಕ್ಕೆ ರೂ 3,000 ಹಾಗೂ ತೃತೀಯ ಸ್ಥಾನಕ್ಕೆ ರೂ. 2,000 ನಗದು ಬಹುಮಾನ ನೀಡಲಾಗುವುದು. 8ನೇ ತರಗತಿಗಾಗಿ ನಿಕಿಲಾ  ವಿದ್ಯಾನಿಕೇತ ಶಾಲೆಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಉಚಿತ ದಾಖಲಾತಿ, ಪಠ್ಯಪುಸ್ತಕ, ನೋಟ್ ಪುಸ್ತಕ ಸೇರಿದಂತೆ ಇತರೆ ಪಠ್ಯ ಪರಿಕರಗಳನ್ನು ನೀಡಲಾಗುವುದು ಹಾಗೂ ಯೋಗ, ನೃತ್ಯ, ಸಂಗೀತವನ್ನು ಕಲಿಸುವುದಾಗಿ ತಿಳಿಸಿದರು.

ನಿಕಿಲಾ ವಿದ್ಯಾನಿಕೇತನ ಸಂಸ್ಥೆ ಅಧ್ಯಕ್ಷ ಬಾಲಸುಬ್ರಹ್ಮಣ್ಯಂ ಅಧ್ಯಕ್ಷತೆವಹಿಸಿದ್ದರು. ಕಾಂಚನ ರಾಜೆಂದ್ರನ್ ಮತ್ತಿತರರು ಇದ್ದರು.ವಿದ್ಯಾರ್ಥಿ ಚರಣ್ ನಿರೂಪಿಸಿದರು.  ದೀಪಿಕ ಸ್ವಾಗತಿಸಿದರು, ಚಂದನ ವಂದಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.