ADVERTISEMENT

ಪಾಸ್‌ ಇದ್ದರೂ ಬಸ್‌ ಮಾತ್ರ ಇಲ್ಲ...

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 6:36 IST
Last Updated 26 ಸೆಪ್ಟೆಂಬರ್ 2013, 6:36 IST
ದೊಡ್ಡಬಳ್ಳಾಪುರ–ಚಿಕ್ಕಬಳ್ಳಾಪುರ ನಡುವೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಬಾಗಿಲಿನಲ್ಲಿ ನೇತಾಡುತ್ತ ಸಂಚರಿಸುವ ವಿದ್ಯಾರ್ಥಿಗಳು
ದೊಡ್ಡಬಳ್ಳಾಪುರ–ಚಿಕ್ಕಬಳ್ಳಾಪುರ ನಡುವೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಬಾಗಿಲಿನಲ್ಲಿ ನೇತಾಡುತ್ತ ಸಂಚರಿಸುವ ವಿದ್ಯಾರ್ಥಿಗಳು   

ದೊಡ್ಡಬಳ್ಳಾಪುರ: ವಿದ್ಯಾರ್ಥಿರ್ಗಳು ಕೆಎಸ್‌ಆರ್‌ಟಿಸಿ ಬಸ್‌ ಪಾಸ್‌ಗಳನ್ನು ಹೊಂದಿದ್ದರೂ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುವಂತಹ ದುಃಸ್ಥಿತಿ ಬಂದಿದೆ ಎಂದು ಚಿಕ್ಕಬಳ್ಳಾಪುರ–ದೊಡ್ಡಬಳ್ಳಾಪುರ ಮಾರ್ಗ ದಲ್ಲಿ ಸಂಚರಿಸುವ ವಿದ್ಯಾರ್ಥಿಗಳು ದೂರಿದ್ದಾರೆ.

ಈ ಬಗ್ಗೆ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳಿಗೆ ಭಾರತ ವಿದ್ಯಾರ್ಥಿ ಫೆಡರೇಷನ್‌ ಸಂಚಾಲಕರು ಹಾಗೂ ವಿದ್ಯಾರ್ಥಿಗಳು ಲಿಖಿತ ದೂರು ನೀಡಿದ್ದಾರೆ.
ದೂರುದಾರ ಎಸ್‌.ಆರ್‌.ಮಂಜುನಾಥ್‌, ವಿ. ಆರ್‌.ಮಹೇಶ್‌, ಶ್ರೀನಾಥ್‌, ರಾಕೇಶ್‌ ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿ, ಪ್ರತಿದಿನ ದೊಡ್ಡಬಳ್ಳಾಪುರ–ಚಿಕ್ಕಬಳ್ಳಾಪುರ ನಡುವೆ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಬಸ್‌ಗಳಲ್ಲಿ ಪ್ರಯಾಣಿಸಲು ಪಾಸ್‌ಗಳನ್ನು ಹೊಂದಿದ್ದಾರೆ. ಆದರೆ ಕೆಎಸ್‌ಆರ್‌ಟಿಸಿ ಬಸ್‌ಗಳು ಉದ್ದೇಶ ಪೂರ್ವಕ ವಾಗಿಯೇ ವಾರದಲ್ಲಿ ಎರಡು ದಿನವಾದರೂ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಇದರಿಂದ ಅನಿವಾರ್ಯವಾಗಿ ಖಾಸಗಿ ಬಸ್‌ಗಳಲ್ಲಿ ಹಣ ನೀಡಿ ಸಂಚರಿಸುವಂತಾಗಿದೆ’ ಎಂದು ದೂರಿದರು.

ಬೆಳಗಿನ ಸಮಯದಲ್ಲಿ ಚಿಕ್ಕಬಳ್ಳಾಪುರ–ದೊಡ್ಡ ಬಳ್ಳಾಪುರ ನಡುವೆ ಕೇವಲ ಎರಡು ಬಸ್‌ ಮಾತ್ರ ಸಂಚರಿಸುತ್ತಿವೆ. ಇದರಿಂದಾಗಿ 50 ಜನ ಪ್ರಯಾಣಿ ಕರು ಸಂಚರಿಸುವ ಬಸ್‌ನಲ್ಲಿ ನೂರಕ್ಕೂ ಹೆಚ್ಚು ಜನ ನೂಕುನುಗ್ಗಲಿನಲ್ಲಿ ಸಂಚರಿಸುವಂತಾಗಿದೆ.

ಈ ಬಗ್ಗೆ ಹಲವಾರು ಬಾರಿ ಡಿಪೊ ವ್ಯವಸ್ಥಾಪಕರಿಗೆ ಲಿಖಿತ ದೂರು ನೀಡಿದ್ದರೂ ಹೆಚ್ಚುವರಿ ಬಸ್‌ ಸೇವೆ ಆರಂಭಿಸಿಲ್ಲ.ಈ ಅವ್ಯವಸ್ಥೆ ಹೀಗೆಯೇ ಮುಂದುವರೆದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.