ADVERTISEMENT

ಬೊಮ್ಮವಾರ ಅರಣ್ಯಕ್ಕೆ ಬೆಂಕಿ

ಸ್ಥಳಕ್ಕೆ ಬಾರದ ಅಗ್ನಿಶಾಮಕ ದಳ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 9:33 IST
Last Updated 20 ಮಾರ್ಚ್ 2014, 9:33 IST

ದೇವನಹಳ್ಳಿ: ತಾಲ್ಲೂಕಿನ ಬೊಮ್ಮ­ವಾರ ಗ್ರಾಮದ ಗೋಮಾಳದಲ್ಲಿ ಬುಧ-­­ವಾರ ಮಧ್ಯಾಹ್ನ ಕಾಣಿಸಿಕೊಂಡ ಬೆಂಕಿಗೆ ಇಲ್ಲಿನ ವಿವಿಧ ಜಾತಿಯ ಗಿಡಮರಗಳು ಆಹುತಿಯಾಗಿವೆ.

‘ಮಧ್ಯಾಹ್ನ 2.45ರಲ್ಲಿ ಬೆಂಕಿ ಕಾಣಿ­ಸಿಕೊಂಡಿತು. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರೂ ಪ್ರಯೋಜನ­ವಾಗಲಿಲ್ಲ’ ಎಂದು ಗ್ರಾ.ಪಂ.ಸದಸ್ಯ ಆರೋ­ಪಿಸಿದ ಸೋಮಶೇಖರ್ ಬಾಬು ಆರೋಪಿಸಿದರು.

‘ನಂತರ ಗ್ರಾಮ ಪಂಚಾಯಿತಿ ಕಾರ್ಯ­ದರ್ಶಿಗೆ ಕರೆ ಮಾಡಿ ಅವ­ರೊಂದಿಗೆ ಗ್ರಾಮದ ಹದಿನೈದು ಯುವ­ಕರು ಮೂರು ತಂಡಗಳಲ್ಲಿ ಬೆಂಕಿ ನಂದಿ­ಸಲು ಸತತ ಒಂದು ಗಂಟೆ ಪ್ರಯತ್ನ ನಡೆಸಿದ ಪರಿಣಾಮ ಅನಾಹುತ ಹತೋಟಿಗೆ ತರಲು ಸಾಧ್ಯವಾಗಿದೆ. ಇದು ತಾಲ್ಲೂಕಿನಲ್ಲಿ ಆಗಿರುವ ನಾಲ್ಕನೆ ಬೆಂಕಿ ಪ್ರಕರಣವಾದರೂ ಅಗ್ನಿಶಾಮಕ ದಳ ವ್ಯವಸ್ಥೆ ಇಲ್ಲದಿರುವುದು ಮತ್ತೊಂದು ದುರಂತ’ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾ.ಪಂ.ಕಾರ್ಯದರ್ಶಿ ಜಯರಾಮೇಗೌಡ ಮಾತನಾಡಿ, ಇಲ್ಲಿನ ಗೋಮಾಳದ ಸ.ನಂ.36 ಪೈಕಿ 84 ಎಕರೆ ಗೋಮಾಳವಿದೆ. ಇದರಲ್ಲಿ 30 ವರ್ಷಗಳ ನೀಲಗಿರಿ ಹಾಗೂ ವಿವಿಧ ಜಾತಿಯ ಗಿಡ ಮರಗಳಿವೆ. ಈಗ ಅಂದಾಜು ಹತ್ತು ಎಕರೆಯಲ್ಲಿನ ವನಸಂಪತ್ತು ಸುಟ್ಟು ಭಸ್ಮವಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.