ADVERTISEMENT

ಮನೆ ಕುಸಿತ ಪರಿಹಾರ ವಿಳಂಬ– ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 5:21 IST
Last Updated 17 ಅಕ್ಟೋಬರ್ 2017, 5:21 IST
ಕುಸಿದ ಮನೆ
ಕುಸಿದ ಮನೆ   

ದೊಡ್ಡಬಳ್ಳಾಪುರ: 15 ದಿನಗಳಿಂದ ನಗರದಲ್ಲಿ ಮಳೆ ಬೀಳುತ್ತಿರುವುದರಿಂದ ಮನೆಗಳು ಕುಸಿದು ಬಿದ್ದಿವೆ. ಈ ಬಗ್ಗೆ ಮನೆಗಳನ್ನು ಕಳೆದುಕೊಂಡಿರುವವರು ನಗರಸಭೆಗೆ ಪರಿಹಾರಕ್ಕಾಗಿ ಅರ್ಜಿಗಳನ್ನು ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಗರಸಭೆ ಸದಸ್ಯ ವಡ್ಡರಹಳ್ಳಿರವಿ, ಆರ್‌.ಕೆಂಪರಾಜ್‌ ದೂರಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿ, ನಗರದ 31 ವಾರ್ಡ್‌ಳಿಂದ ಸುಮಾರು 16 ಜನ ಮನೆಗಳನ್ನು ಕಳೆದುಕೊಂಡಿರುವ ಬಡವರು ದುರಸ್ತಿ ಮಾಡಿಕೊಳ್ಳಲು ಹಣ ಇಲ್ಲದೆ, ವಾಸಕ್ಕೆ ಮನೆ ಇಲ್ಲದೆ ಪರದಾಡುವಂತಾಗಿದೆ ಎಂದರು.

ಮನೆಗಳನ್ನು ಕಳೆದುಕೊಂಡವರಿಗೆ ₹5,000 ರಿಂದ ₹20 ಸಾವಿರ ವರೆಗೂ ತುರ್ತಾಗಿ ಪರಿಹಾರ ನೀಡಲು ಅವಕಾಶ ಇದೆ. ಅರ್ಜಿ ಸಲ್ಲಿಸಿದ 24 ಗಂಟೆಗಳ ಒಳಗಾಗಿ ಪರಿಹಾರ ನೀಡಬೇಕಾಗಿದೆ.

ADVERTISEMENT

ನಗರಸಭೆ ಎಂಜಿನಿಯರ್‌ಗಳು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ್ದರೂ ಇದುವರೆಗೂ ನಗರಸಭೆ ಅಧ್ಯಕ್ಷರು, ಪೌರಾಯುಕ್ತರು ಪರಿಹಾರ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದರು. ಮನೆಗಳನ್ನು ಕಳೆದುಕೊಂಡಿರುವ ಬಡವರಿಗೆ ತುರ್ತಾಗಿ ನಗರಸಭೆಯಿಂದ ಪರಿಹಾರ ನೀಡ ಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.