ADVERTISEMENT

ಮಾಗಡಿ:ಜೀತಮುಕ್ತಿ ಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST

ಮಾಗಡಿ: ತಾಲ್ಲೂಕಿನ ವಿವಿಧ ಕಾರ್ಖಾನೆಗಳಲ್ಲಿರುವ ಕೂಲಿಕಾರ್ಮಿಕರನ್ನು ಜೀತದಾಳುಗಳಂತೆ ಅಮಾನವೀಯವಾಗಿ  ನಡೆಸಿಕೊಳ್ಳಲಾಗುತ್ತಿದ್ದು, ಅಂಥ ಕಾರ್ಮಿಕರನ್ನು ಗುರುತಿಸಿ ಪರಿಹಾರ ನೀಡಿ ಪುನರ್ವಸತಿ ಕಲ್ಪಿಸಬೇಕೆಂದು ಎಂದು ಜೀವಿಕ ಸಂಚಾಲಕ ಎ.ಗಂಗಹನುಮಯ್ಯ ಆರೋಪಿಸಿದರು.

ಅವರು ಜೀತ ವಿಮುಕ್ತಿ ಕರ್ನಾಟಕದ ವತಿಯಿಂದ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ತಾಲ್ಲೂಕಿನಲ್ಲಿ ಸುಮಾರು 480 ಜನ ಜೀತಕಾರ್ಮಿಕರನ್ನು ಗುರುತಿಸಲಾಗಿದೆ. ರೇಷ್ಮೆ ಹುರಿ ಕಾರ್ಖಾನೆ, ಇಟ್ಟಿಗೆ ಕಾರ್ಖಾನೆ, ಕಲ್ಲುಗಣಿ, ತೋಟಗಳು, ಕೋಳಿ ಫಾರಂಗಳಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ.

ಪಾವಗಡ, ಶಿರಾ, ಮಧುಗಿರಿ, ಮಡಕಶಿರಾ ಇತರೆಡೆಗಳಿಂದ ಮುಂಗಡ ಹಣವನ್ನು ನೀಡಿ ಕೂಲಿಗಾಗಿ ಅವರನ್ನು ಕರೆತರಲಾಗಿದ್ದು, ಅವರಿಗೆ ಸರಿಯಾಗಿ ಸಂಬಳ ನೀಡದೇ ಜೀತದಾರರಾಗಿ ದುಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿ ಸಿದರು.

ಜೀತ ವಿಮುಕ್ತಿ ಕುರಿತು ರಾಮನಗರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಗಂಗಹನುಮಯ್ಯ ಆರೋಪಿಸಿದರು.

ಮಹಿಳಾ ಸಂಚಾಲಕಿ ಕೆಂಪಲಕ್ಷ್ಮಮ್ಮ, ತಾಲ್ಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಮಂಜುಳಾ ಜೀತವಿಮುಕ್ತಿ ಬಗ್ಗೆ ಮಾತನಾಡಿದರು. ಕಣನೂರಿನ ಬಾಲಯ್ಯ, ಸುಗ್ಗನಹಳ್ಳಿ ಜಯಮ್ಮ, ತಿಮ್ಮರಾಜು, ರಮೇಶ್, ಪ್ರಕಾಶ್, ಕುಮಾರಿ ಹಾಗೂ ತಾಲ್ಲೂಕಿನಾದ್ಯಂತ ಆಗಮಿಸಿದ್ದ ನೂರಾರು ಜನ ಜೀವಿಕ ಕಾರ್ಯಕರ್ತರು ಭಾಗವಹಿಸಿದ್ದರು. ಶಿರಸ್ತೀದಾರ್ ವಿಜಯಣ್ಣ ಅವರಿಗೆ ಜೀವಿಕ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.