ADVERTISEMENT

ಯಲ್ಲಪ್ಪ ಸೇವೆ ಸ್ಮರಣೀಯ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST

ಆನೇಕಲ್: `ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಅಭಿವೃದ್ಧಿ ಕಾರ್ಯಗಳಿಗೆ ಶ್ರಮಿಸಿ, ಜನ ಸೇವೆಯೇ ಈಶ ಸೇವೆ ಎಂದು ನಂಬಿದ್ದ ತಾಲ್ಲೂಕಿನ ಸಿಡಿಹೊಸಕೋಟೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಯಲ್ಲಪ್ಪ ಅವರ ಆತ್ಮಕ್ಕೆ ಶಾಂತಿ ಸಿಗಲಿ~ ಎಂದು ಮಾಜಿ ಸಚಿವ ಎಂ.ಪಿ.ಕೇಶವಮೂರ್ತಿ ನುಡಿದರು.

ಅವರು ಪಟ್ಟಣದ ಗಾಂಧಿ ಕುಟೀರದಲ್ಲಿ ದಿವಂಗತ ಯಲ್ಲಪ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

`ತಮ್ಮ 18ನೇ ವಯಸ್ಸಿಗೇ ರಾಜಕೀಯ ಪ್ರವೇಶ ಮಾಡಿದ ಯಲ್ಲಪ್ಪ ಅವರು ಗ್ರಾಮದ ಕೆಲಸಗಳನ್ನು ಅತ್ಯಂತ ಮುತುವರ್ಜಿಯಿಂದ ನಿರ್ವಹಿಸುತ್ತಿದ್ದರು. ರಾಜ್ಯಮಟ್ಟದ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಅವರು ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾರ್ಯಗಳು ಜಾರಿಗೊಳ್ಳಲು ಶ್ರಮಿಸಿದ್ದಾರೆ. ವಿವಿಧ ಇಲಾಖೆಯ ಕಚೇರಿಗಳನ್ನು ಸುತ್ತಾಡಿ ಯೋಜನೆಗಳು ಜಾರಿಗೆ ಬರಲು ಶ್ರಮಿಸುತ್ತಿದ್ದರು. ರಾಜ್ಯ ಮಟ್ಟದಲ್ಲಿ ಪಂಚಾಯತ್ ಪರಿಷತ್ ಸ್ಥಾಪನೆ ಮಾಡುವಲ್ಲಿ ಹಾಗೂ ಅನೇಕ ಸಂಘ ಸಂಸ್ಥೆಗಳನ್ನು ಕಟ್ಟುವಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದರು~ ಎಂದರು.

ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ.ಕೆ.ಜಗನ್ನಾಥ ಮಾತನಾಡಿ, `ಆನೇಕಲ್ ತಾಲ್ಲೂಕಿನಲ್ಲಿ ಹುಟ್ಟಿ ಬೆಳೆದು ಪಂಚಾಯತ್ ಪರಿಷತ್ ಮೂಲಕ ರಾಜ್ಯ ಮಟ್ಟದ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು ಎಂದು ನುಡಿದರು.

ಪುರಸಭಾ ಮಾಜಿ ಅಧ್ಯಕ್ಷೆ ಸುಜಾತ ರಾಜಣ್ಣ, ಸದಸ್ಯ ಮುರಳಿ, ಪ್ರಸಾದ್, ಗಾಂಧಿ ಕುಟೀರ ಸಮಿತಿಯ ಅಧ್ಯಕ್ಷ ವಸಂತರಾಜು, ಕಾರ್ಯದರ್ಶಿ ಶ್ರೀನಿವಾಸ್ ಜೆಟ್ಟಿ, ಸಿಪಿಎಂನ ಅಶೋಕ ರೆಡ್ಡಿ, ಜೆಡಿಎಸ್ ಮುಖಂಡ ಸಮಂದೂರು ವೀರಣ್ಣ ಮತ್ತಿತರರು ಯಲ್ಲಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು. ನಾಗರಿಕ ವೇದಿಕೆಯ ಸಂಚಾಲಕರಾದ ಮೂರ್ತಿ, ಶಿವಕುಮಾರ್, ಜಂಪಾಲಿ, ರುದ್ರಸ್ವಾಮಿ, ಆನಂದ್, ್ಲಲೇಶ್ಲಯ್ಯ, ವೆಂಕಟೇಶ್ ರೆಡ್ಡಿ, ಗೋಪಾಲಕೃಷ್ಣ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.