ADVERTISEMENT

ರಸ್ತೆ ಉಬ್ಬು ಸರಿಪಡಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST

ವಿಜಯಪುರ: ಇಲ್ಲಿಗೆ ಸಮೀಪದ ಹೊಸಕುರುಬರಕುಂಟೆ ಬಳಿ ಬೆಂಗಳೂರು ಮುಖ್ಯರಸ್ತೆಯಲ್ಲಿ ನಿರ್ಮಿಸಿರುವ  ರಸ್ತೆ ಉಬ್ಬುಗಳು ಅವೈಜ್ಞಾನಿಕವಾಗಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಈ ರಸ್ತೆಯಲ್ಲಿ ಟೆಂಪೋ ಉರುಳಿ ಅನೇಕರು ಸಾವಿಗೀಡಾದ್ದರು. ಸ್ಥಳ ಪರಿಶೀಲನೆ ನಡೆಸಿದ ಇಲಾಖೆಯು ತುಂಬ ಎತ್ತರ ಇರುವ ಏಳೆಂಟು ಹಂಪ್‌ಗಳನ್ನು ಒಂದೇ ಜಾಗದಲ್ಲಿ ನಿರ್ಮಿಸಿದೆ.

ಇಲಾಖೆ ನಿರ್ಮಿಸಿರುವ ಈ ಅವೈಜ್ಞಾನಿಕ ಹಂಪ್‌ಗಳ ಪರಿಣಾಮ ದ್ವಿಚಕ್ರ ವಾಹನ ಸವಾರರು ವೇಗವಾಗಿ ಬಂದು ಮುಗ್ಗರಿಸಿ ಬಿದ್ದು ಕಾಲು ಮುರಿದುಕೊಳ್ಳುತ್ತಿದ್ದಾರೆ.
 
ಲಾರಿಗಳಂತಹ ದೊಡ್ಡವಾಹನಗಳು ಹಂಪ್‌ಗಳು ಇರುವುದನ್ನು ಗಮನಿಸದೆ ಮತ್ತಷ್ಟು ವೇಗವಾಗಿ ಮುನ್ನುಗ್ಗುತ್ತಾರೆ ಹಾಗಾಗಿ ನಗರ ಪ್ರದೇಶದಲ್ಲಿರುವ ವೈಜ್ಞಾನಿಕ ರೀತಿಯ ಹಂಪ್‌ಗಳನ್ನು ಇಲ್ಲಿ ಕೂಡ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.