ADVERTISEMENT

ರೋಟರಿ: ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 11:10 IST
Last Updated 4 ಜುಲೈ 2013, 11:10 IST

ವಿಜಯಪುರ:  `ರೋಟರಿ ಸಂಸ್ಥೆಯ ಸದಸ್ಯರು ಜನರ ನೋವು ನಲಿವುಗಳಿಗೆ ಸ್ಪಂದಿಸಿ ಸಂಪೂರ್ಣ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು' ಎಂದು ರೋಟರಿಯ ಮಾಜಿ ಜಿಲ್ಲಾ ಗರ್ವನರ್ ಎಸ್.ನಾಗೇಂದ್ರ ತಿಳಿಸಿದರು.

ಪಟ್ಟಣದ ಸುಬ್ಬಮ್ಮ ಚನ್ನಪ್ಪ ಸಮುದಾಯ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಜಯಪುರ ಸಂಘದ 2013-14ನೇ ಸಾಲಿನ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, `ಜನಸೇವೆಯಲ್ಲಿ ರೋಟರಿಯ ಪಾತ್ರ ಮಹತ್ವದ್ದಾಗಿದೆ' ಎಂದು ತಿಳಿಸಿದರು.

ನೂತನ ಅಧ್ಯಕ್ಷರಾಗಿ ವಿ.ಪಿ.ಶಿವರುದ್ರಮೂರ್ತಿ ಅಧಿಕಾರ ಸ್ವೀಕರಿಸಿದರು.

7ನೇ ತರಗತಿಯಿಂದ 10ನೇ ತರಗತಿ ವರೆಗೆ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪಟ್ಟಣದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಪುರಸ್ಕರಿಸಲಾಯಿತು. 30 ಮಂದಿ ವಿದ್ಯಾರ್ಥಿಗಳಿಗೆ  ಶಬ್ದಕೋಶ  ನೀಡಲಾಯಿತು. ಅಂಧರ ಕ್ಷೇಮಾಭ್ಯುದಯ ಸಂಸ್ಥೆಯ ಮಕ್ಕಳಿಗೆ ಬ್ರೈಲ್ ಪೇಪರ್ ಮತ್ತು ಅಂಗನವಾಡಿ ಮಕ್ಕಳಿಗೆ ಔಷಧಿ ವಿತರಿಸಲಾಯಿತು.

ನೂತನ ಪದಾಧಿಕಾರಿಗಳು: ವಿ.ಪಿ.ಶಿವರುದ್ರಮೂರ್ತಿ(ಅಧ್ಯಕ್ಷ), ವಿ.ಎಸ್.ರವಿ (ನಿಕಟ ಪೂರ್ವ ಅಧ್ಯಕ್ಷ), ನವೀನ್.ಸಿ.(ನಿಯೋಜಿತ ಅಧ್ಯಕ್ಷ), ಎಸ್.ಶೈಲೇಂದ್ರಕುಮಾರ್ (ಉಪಾಧ್ಯಕ್ಷ), ಎನ್.ವಿಜಯರಾಜ್ (ಕಾರ್ಯದರ್ಶಿ), ಬಿ.ಸಿ.ಸಿದ್ದರಾಜು ( ಸಹ ಕಾರ್ಯದರ್ಶಿ), ಬಿ.ನರೇಂದ್ರಕುಮಾರ್ (ಖಜಾಂಚಿ), ಜೆ.ನಂಜಣ್ಣ( ಸಾರ್ಜೆಂಟ್-ಅಟ್-ಆರ್ಮ್ಸ್‌), ನಿರ್ದೇಶಕರು: ಎಸ್.ಕುಮಾರಸ್ವಾಮಿ, ಎಂ.ಶಂಕರ್, ಸಿ.ಸುರೇಶ್, ಡಿ.ಎಸ್.ನಾಗೇಂದ್ರ, ಚ.ವಿಜಯಬಾಬು, ಬಿ.ವಿನಯ್‌ಕುಮಾರ್ (ಬುಲೆಟಿನ್ ಎಡಿಟರ್), ಸಲಹಾ ನಿರ್ದೇಶಕರು: ಕೆ.ಸದ್ಯೋಜಾತಪ್ಪ, ಜಿ.ವೀರಭದ್ರಪ್ಪ, ಸಿ.ಬಸಪ್ಪ, ಪಿ.ಚಂದ್ರಪ್ಪ, ಎಂ.ಶಿವಪ್ರಸಾದ್, ಎಂ.ರುದ್ರಮೂರ್ತಿ, ಪೋಲಿಯೊ ಪ್ಲಸ್ ಛೇರ್ ಪರ‌್ಸನ್ ಆಗಿ ಎಸ್.ಬಸವರಾಜ್ ಅಧಿಕಾರ ಸ್ವೀಕರಿಸಿದರು.

ಮಹಿಳಾ ಸದಸ್ಯರಾಗಿ ರೋಟರಿ ಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾ ಮತ್ತು ಪುರಸಭಾ ಆರೋಗ್ಯಾಧಿಕಾರಿ ಮಂಜುಳಾ ದೇವಿಯನ್ನು ಆಯ್ಕೆ ಮಾಡಲಾಯಿತು.

ಸಂಸ್ಥಾಪಕ ಅಧ್ಯಕ್ಷ ರಾಮಬಸಪ್ಪ, ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ನಾಗರಾಜ್, ಇನ್ನರ್ ವೀಲ್ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.ಶಿವಪ್ರಸಾದ್ ಸ್ವಾಗತಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.