ADVERTISEMENT

ವಿದ್ಯಾರ್ಥಿಗಳ ದಂತ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 22 ಮೇ 2012, 5:50 IST
Last Updated 22 ಮೇ 2012, 5:50 IST

ದೇವನಹಳ್ಳಿ: ಮಕ್ಕಳ ಪ್ರಾಥಮಿಕ ಬೆಳವಣಿಗೆ ಹಂತದಲ್ಲಿ ಚಾಕೊಲೇಟ್ ಸೇರಿದಂತೆ ವಿವಿಧ ರೀತಿಯ ಸಿದ್ಧಪಡಿಸಿದ ಸಿಹಿತಿನಿಸು ಸೇವನೆ ದಂತಕ್ಷಯ ಹಾಗೂ ದಂತ ಮಾರಕರೋಗಕ್ಕೆ ಕಾರಣವಾಗುತ್ತಿದೆ ಎಂದು ಕೃಷ್ಣದೇವರಾಯ ದಂತ ವೈದ್ಯಕೀಯ ಕಾಲೇಜು ದಂತ ತಜ್ಞ ಡಾ.ಸಂಜಯ್‌ಕುಮಾರ್ ತಿಳಿಸಿದರು.

ಪಟ್ಟಣದ ಜ್ಞಾನ ಗಂಗೋತ್ರಿ ಪಬ್ಲಿಕ್ ಶಾಲೆ ಹಾಗೂ ಶ್ರಿ ಕೃಷ್ಣದೇವರಾಯ ದಂತ ವೈದ್ಯಕೀಯ ಕಾಲೇಜು ಸಂಯುಕ್ತಾಶ್ರಯದಲ್ಲಿ ಶಾಲಾ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಮಕ್ಕಳ ದಂತ ಪರೀಕ್ಷೆ ಹಾಗೂ ಸುರಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪೋಷಕರು ಪ್ರಾಥಮಿಕ ಹಂತದಲ್ಲೇ ಮಕ್ಕಳ ದಂತದ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ಡಾ.ಸುಧಾನಂದ್, ಪ್ರೇಮ ಶಿಕ್ಷಣ ಸಂಸ್ಥೆ ಅಧ್ಯಕ್ಷ ದಾಸಪ್ಪ, ಮುಖ್ಯ ಶಿಕ್ಷಕಿ ಪುನಿತಾ ಇದ್ದರು. ಇದೇ ಸಂಧರ್ಭದಲ್ಲಿ 148 ವಿದ್ಯಾರ್ಥಿಗಳಿಗೆ ದಂತ ಪರೀಕ್ಷೆ ನಡೆಸಿ ಸೂಕ್ತ ಸಲಹೆ ಸೂಚನೆ ನೀಡಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.