ADVERTISEMENT

ಶರಣರ ನೆಲೆಗಳ ಅಭಿವೃದ್ಧಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 6:29 IST
Last Updated 3 ಸೆಪ್ಟೆಂಬರ್ 2013, 6:29 IST

ಮಾಗಡಿ: `ಕಲ್ಯಾಣ ಕ್ರಾಂತಿಯ ನಂತರ ಅಲ್ಲಿಂದ ಚದುರಿದ ಶರಣರು, ಮಾಗಡಿ ಹಾಗೂ ಸುತ್ತಮುತ್ತ ಬಂದು ನೆಲಸಿದ್ದರು. ಹೀಗಾಗಿ ಈ ಪ್ರದೇಶಗಲ್ಲಿನ ಶರಣರ ಮಠಗಳು ಹಾಗೂ ನೆಲೆಗಳನ್ನು ಉಳಿಸಿ, ಅಭಿವೃದ್ದಿ ಪಡಿಸಬೇಕಿದೆ' ಎಂದು ಲೇಖಕ ಕಂಬಾಳು ಮಂಜುನಾಥ್ ನುಡಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶ್ರೀಗಿರಿಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಸರೋಜಮ್ಮ ಶಿವಲಿಂಗೇಗೌಡ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯಲ್ಲಿ ಶರಣರ ಪಾತ್ರ ಕುರಿತು ಅವರು ಉಪನ್ಯಾಸ ನೀಡಿದರು.

ಬಸವಾದಿ ಶರಣರ ಆದರ್ಶಗಳನ್ನು ಇಂದಿನ ಯುವಜನತೆಗೆ ತಲುಪಿಸುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ತಾಲ್ಲೂಕು ಕ.ಸಾ.ಪ.ಅಧ್ಯಕ್ಷ ಗಂ.ದಯಾನಂದ್ ಮಾತನಾಡಿ, `ಡಿ.ವಿ.ಜಿ ಅವರು ರಚಿಸಿರುವ ಮಂಕುತ್ತಿಮ್ಮನ ಕಗ್ಗದಲ್ಲಿನ ಕನಿಷ್ಠ 10 ಪದ್ಯಗಳನ್ನು ಕಂಠಪಾಠ ಮಾಡಿ ಹಾಡುವ ಮಕ್ಕಳಿಗೆ ಬಹುಮಾನ ನೀಡಲಾಗುವುದು' ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆಯ ಮುಖ್ಯಶಿಕ್ಷಕ ಗೋಪಾಲ್ ಹಾಗೂ ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಪಿ.ವೆಂಕಟೇಶ್ ಮಾತನಾಡಿದರು.

ಶಿಕ್ಷಕರು ಮತ್ತು ಮಕ್ಕಳು, ಪೋಷಕರು ಹಾಗೂ ತಾಲ್ಲೂಕು ಕ.ಸಾ.ಪ. ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.