ADVERTISEMENT

ಶಿಕ್ಷಣದಿಂದ ಸಂಸ್ಕೃತಿ ಪ್ರಾಪ್ತಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2012, 19:30 IST
Last Updated 2 ಫೆಬ್ರುವರಿ 2012, 19:30 IST

ದೊಡ್ಡಬಳ್ಳಾಪುರ:  ಮನುಷ್ಯನಿಗೆ ಉನ್ನತ ಸಂಸ್ಕೃತಿ, ವಿವೇಕಗಳು ದೊರೆ ಯಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಸಮಾಜ ಸೇವಕ ಹಾಗೂ ಹಿರಿಯ ಗಾಂಧಿವಾದಿ ವಿ.ಚನ್ನಪ್ಪ ಹೇಳಿದರು.

ಅವರು ತಾಲ್ಲೂಕಿನ ನೇರಳಘಟ್ಟ ಗ್ರಾಮದಲ್ಲಿ ಯಶೋದಾ ಪ್ರತಿಷ್ಠಾನ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

 ಗ್ರಾಮೀಣ ಪ್ರದೇಶದ ಜನ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡ ಬೇಕು. ವಿದ್ಯಾರ್ಥಿಗಳು ಗಾಂಧಿ, ಬುದ್ಧ, ಬಸವರ ಜೀವನ ಚರಿತ್ರೆಗಳನ್ನು ಓದಿ ಉತ್ತಮ ಮಾನವೀಯ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಯಶೋದಾ ಪ್ರತಿಷ್ಠಾನದ ಕಾರ್ಯ ದರ್ಶಿ ಮುನಿರಾಜು ಮಾತನಾಡಿ, ಪ್ರತಿ ಷ್ಠಾನವು 15 ವರ್ಷಗಳಿಂದಲೂ ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಒಂದು ದಿನದ ಅನ್ನದಾಸೋಹ ನಡೆಸಿಕೊಂಡು ಬರುತ್ತಿದೆ. ಬಸವಣ್ಣನವರ ತ್ರಿವಿಧ ದಾಸೋಹ ಹಾಗೂ ಕುವೆಂಪು ಅವರ ವೈಚಾರಿಕತೆ ಈ ಕಾರ್ಯಕ್ರಮಕ್ಕೆ ಸ್ಫೂರ್ತಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಸಿ.ರಾಮಚಂದ್ರ, ಸದಸ್ಯರಾದ ಗಂಗಾಪ್ರಸಾದ್, ಸುಧಾಮಣಿ, ಗ್ರಾ.ಪಂ. ಸದಸ್ಯ ಡಿ.ವೆಂಕಟೇಶ್, ಎಸ್‌ಡಿಎಂಸಿ ಅಧ್ಯಕ್ಷ ಎಚ್.ರಾಮಕೃಷ್ಣ,ಉಪಾಧ್ಯಕ್ಷ ಕೆ.ನಟರಾಜ್, ಶಿಕ್ಷಕರಾದ ರಾಮಾಂ ಜಿನಪ್ಪ, ಗಂಗಾಂಬಿಕೆ, ಸುಶೀಲಮ್ಮ, ಮಾರಕ್ಕ, ಪೂರ್ಣಿಮಾ ಮತ್ತಿತರರು ಹಾಜರಿದ್ದರು.
ವಿದ್ಯಾರ್ಥಿಗಳಾದ ಯಕ್ಷಿ ಮತ್ತು ಧ್ರುವ ಗಾಂಧೀಜಿ ಕುರಿತಾದ ಗೀತೆಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.