ADVERTISEMENT

ಸಾಮಾಜಿಕ ಜಾಲತಾಣ ಸದುಪಯೋಗಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 4:45 IST
Last Updated 19 ಅಕ್ಟೋಬರ್ 2012, 4:45 IST

ದೊಡ್ಡಬಳ್ಳಾಪುರ: ಯುವಕರು ಸಾಮಾಜಿಕ ಜಾಲತಾಣಗಳ ಸದುಪಯೋಗ ಪಡೆದುಕೊಳ್ಳುವ ಬದಲಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಸಾಧನವಾಗಿ ಅದನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕನಸವಾಡಿ ಗ್ರಾಮದ ಜೀನಿಯಸ್ ಕಂಪ್ಯೂಟರ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಎನ್.ಗಂಗರಾಜು ತಿಳಿಸಿದರು.

 ಕನಸವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ತಾಲ್ಲೂಕಿನ ಮದುರೆ ಗ್ರಾಮದಲ್ಲಿ ಹಮ್ಮಿಕೊಂಡಿರುವ ಎನ್‌ಎಸ್‌ಎಸ್ ಸೇವಾ ಶಿಬಿರದಲ್ಲಿ `ಆಧುನಿಕ ಬದುಕಿನಲ್ಲಿ ಕಂಪ್ಯೂಟರ್ ಮಹತ್ವ ಕುರಿತ~ ಉಪನ್ಯಾಸ ಕಾರ್ಯಕ್ರಮದಲ್ಲಿ  ಮಾತನಾಡಿದರು. 

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಗಣಕಯಂತ್ರದ ಬಳಕೆಯನ್ನು ಕಲಿತುಕೊಂಡು, ಸಮಾಜದ ಹಿತಕ್ಕೆ ಅದನ್ನು ಬಳಸಬೇಕು ಎಂದರು.

ಕುವೆಂಪು ಕಾಲೇಜಿನ ಉಪನ್ಯಾಸಕ ಯತೀಶ್‌ಕುಮಾರ್ ಮಾತನಾಡಿದರು.  ಹೆಸರುಘಟ್ಟ  ಸಾಯಿ ಕಂಪ್ಯೂಟರ್ಸ್‌ನ ಪ್ರವೀಣ್ ಶಿಕ್ಷಣದಲ್ಲಿ ಕಂಪ್ಯೂಟರನ್ನು ಬಳಸಿಕೊಳ್ಳುವ ವಿವಿಧ ಮಾದರಿಗಳನ್ನು ಪರಿಚಯಿಸಿದರು. ಉಪನ್ಯಾಸಕ ಎಸ್.ಕೆ. ಹನುಮೇಗೌಡ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಸ್‌ಎಸ್ ಯೋಜನಾಧಿಕಾರಿ ಕೆ.ಎಲ್.ಶ್ರೀನಿವಾಸ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.