ದೊಡ್ಡಬಳ್ಳಾಪುರ: ‘ಪ್ರತಿ ಮನುಷ್ಯನ ಯಶಸ್ವಿ ಬದುಕಿನ ಹಿಂದೆ ಆರೋಗ್ಯದ ಸೂತ್ರಗಳು ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತವೆ’ ಎಂದು ಆರ್ಟ್ ಆಫ್ ಲಿವೀಂಗ್ ಸಂಸ್ಥೆಯ ಡಾ.ರವಿಶಂಕರ್ ಗುರೂಜಿ ಹೇಳಿದರು. ತಾಲ್ಲೂಕಿನ ಜಿಂಕೆಬಚ್ಚಹಳ್ಳಿ ಗ್ರಾಮದಲ್ಲಿ ಆದರ್ಶ ಚೇತನ ಟ್ರಸ್ಟ್ ನೇತೃತ್ವದಲ್ಲಿ ನಡೆದ ನಾಡಿ ಪರೀಕ್ಷೆ ಶಿಬಿರದಲ್ಲಿ ಅವರು ಮಾತನಾಡಿದರು.
‘ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸೇವೆ ಮಾಡುವ ಸಂಘ ಸಂಸ್ಥೆಗಳಿಗೆ ಜನರು ಪ್ರೋತ್ಸಾಹ ನೀಡಬೇಕು. ನಗರಗಳಲ್ಲಿರುವ ಸೇವಾ ಸಂಸ್ಥೆಗಳು ಗ್ರಾಮಾಂತರ ಪ್ರದೇಶ ಜನರಿಗೆ ತಮ್ಮ ಸೇವೆಗಳನ್ನು ವಿಸ್ತರಿಸಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಹಲವು ಕಾಯಿಲೆಗಳಿಗೆ ನಾಡಿ ಶಾಸ್ತ್ರದ ಮೂಲಕ ಚಿಕಿತ್ಸೆ ನೀಡುವ ವಿಧಾನಗಳನ್ನು ಡಾ.ರವಿಶಂಕರ್‌ಗುರೂಜೀ ವಿವರಿಸಿದರು.
ಕಾರ್ಯಕ್ರಮದಲ್ಲಿ ಮಜರಾ ಹೊಸಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ವಿ.ಲೋಕೇಶ್, ಸದಸ್ಯ ಎಚ್.ಎಂ.ಕೃಷ್ಣಮೂರ್ತಿ, ಕಾಂಗ್ರೆಸ್ ಮುಖಂಡ ತಿ.ರಂಗರಾಜು, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಚ್.ಪಿ.ಸುಬ್ಬೇಗೌಡ, ತಾ.ಪಂ.ಮಾಜಿ ಅಧ್ಯಕ್ಷ ಬಿ.ಎಚ್.ಕೆಂಪಣ್ಣ, ಮುಖಂಡರಾದ ಆನಂದ್‌ಕುಮಾರ್, ಕರಗಪ್ಪ, ರಘು, ಕನಕರಾಜ್, ರೂಪೇಶ್ ಜಿ.ರಾವ್, ಆದಿತ್ಯ ನಾಗೇಶ್ ಮುಂತಾದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.