ADVERTISEMENT

‘ಮಾಧ್ಯಮಗಳಿಂದ ಒಳ್ಳೆಯ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 10:04 IST
Last Updated 24 ಸೆಪ್ಟೆಂಬರ್ 2013, 10:04 IST

ವಿಜಯಪುರ: ‘ವಿದ್ಯಾರ್ಥಿಗಳು ಸಮೂಹ ಮಾಧ್ಯಮಗಳಿಂದ ಕೇವಲ ಒಳ್ಳೆಯ ಅಂಶಗಳನ್ನು ಮಾತ್ರ ಸ್ವೀಕರಿ ಸಬೇಕು’ ಎಂದು ರೋಟರಿ ಅಧ್ಯಕ್ಷ ವಿ.ಪಿ.ಶಿವರುದ್ರಮೂರ್ತಿ ತಿಳಿಸಿದರು.

ಪಟ್ಟಣದ ರೋಟರಿ ಶಾಲೆಯಲ್ಲಿ ರೋಟರಿ ಸಂಘದ ವತಿಯಿಂದ‘ ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳ ಮೇಲೆ ಸಮೂಹ ಮಾಧ್ಯಮಗಳ ಪರಿಣಾಮ’ ವಿಷಯದ ಕುರಿತು ಏರ್ಪಡಿಸಿದ್ದ ಚರ್ಚಾ ಸ್ಪರ್ಧೆ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಸಂಪಾದನೆ ಮಾಡಬೇಕೆಂದು ತಿಳಿ ಸಿದರು.ಕಾರ್ಯದರ್ಶಿ ವಿಜಯರಾಜು ಸಂಘದ ಕಾರ್ಯಕ್ರಮಗಳನ್ನು ವಾಚಿಸಿ ದರು.

ಇತ್ತೀಚೆಗೆ ನಿಧನರಾದ ಪುರಸಭಾ ಮಾಜಿ ಅಧ್ಯಕ್ಷ ಅಬ್ದುಲ್‌ ಖಾಲಕ್‌ ಅವರಿಗೆ ಒಂದು ನಿಮಿಷ  ಮೌನಾ ಚರಿಸಿ ಶ್ರದ್ಧಾಂಜಲಿ ಸಲ್ಲಿಸ ಲಾಯಿತು.

ಚರ್ಚಾ ಸ್ಪಧೆಯಲ್ಲಿ  ಪಟ್ಟಣದ ರೋಟರಿ ಶಾಲೆ, ಜೇಸೀಸ್‌ ಶಾಲೆ, ಎವರ್‌ಗ್ರೀನ್‌ ಶಾಲೆ ಹಾಗೂ ಪ್ರಗತಿ ಶಾಲೆ  ವಿದ್ಯಾರ್ಥಿಗಳು ಭಾಗ ವಹಿಸಿದ್ದರು.

ವಿಜೇತ ವಿದ್ಯಾರ್ಥಿಗಳಿಗೆ ಯುವ ಜನ ಸೇವಾ ನಿರ್ದೇಶಕ ಎಂ.ಶಂಕರ್‌ ಬಹುಮಾನ ವಿತರಿಸಿದರು. ಬಿ.ಸಿ. ಸಿದ್ಧರಾಜು ಸ್ವಾಗತಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.