ದೊಡ್ಡಬಳ್ಳಾಪುರ: ರೋಗಿಗಳ ಪ್ರಾಣ ರಕ್ಷಿಸಲು ಸರ್ಕಾರ ರಸ್ತೆಗಿಳಿಸಿದ 108 ಅಂಬುಲೆನ್ಸ್ ವಾಹನಗಳು ಸೂಕ್ತ ನಿರ್ವಹಣೆ ಇಲ್ಲದೆ ಮಾರ್ಗ ಮಧ್ಯದಲ್ಲಿ ಎಲ್ಲೆಂದರಲ್ಲಿ ಕೆಟ್ಟು ನಿಂತು ರೋಗಿಗಳು ಮತ್ತಷ್ಟು ನರಳುವಂತಾಗಿದೆ' ಎಂದು ತಿಪ್ಪೂರು ಗ್ರಾಮದ ನಿವಾಸಿ ಕುಶಕುಮಾರ್ ದೂರಿದ್ದಾರೆ.
`ಆ್ಯಂಬುಲೆನ್ಸ್‌ಗಳಿಗೆ ಗುಣಮಟ್ಟದ ಟೈರ್‌ಗಳನ್ನು ಬಳಸಬೇಕು.ಆದರೆ ತಾಲ್ಲೂಕಿನ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿನ 108 ವಾಹನಗಳ ಬಹುತೇಕ ಟೈರ್‌ಗಳು ಸವೆದು ಹೋಗಿರುವುದೇ ಇಂತಹ ಘಟನೆಗಳು ನಡೆಯಲು ಕಾರಣವಾಗಿದೆ. ಈ ಬಗ್ಗೆ ಕೂಡಲೇ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು 108 ತುರ್ತು ಸೇವಾ ವಾಹನಗಳಿಗೆ ಹೊಸ ಟೈರ್‌ಗಳನ್ನು ಹಾಕಿಸಲು ಕ್ರಮ ಕೈಗೊಳ್ಳಬೇಕು' ಎಂದು ಅವರು ಆಗ್ರಹಿಸಿದ್ದಾರೆ.
ಸೋಮವಾರ ಸಂಜೆ ದೊಡ್ಡಬೆಳವಂಗಲ ಆರೋಗ್ಯ ಕೇಂದ್ರದಿಂದ ನಗರದ ವಿವೇಕ ನಗರದಲ್ಲಿ ರೋಗಿಯೊಬ್ಬರನ್ನು ಕರೆತರಲು ಹೊರಟಿದ್ದ 108 ವಾಹನ ಕೊಡಿಗೇಹಳ್ಳಿ ಬಳಿ ಚಕ್ರ ಕಳಚಿಕೊಂಡಿತು. ಅದೃಷ್ಟವಾಶತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ' ಎಂಬುದನ್ನು ಅವರು ನೆನಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.