ADVERTISEMENT

₹4.98 ಕೋಟಿ ವೆಚ್ಚದಲ್ಲಿ ನಗರಸಭೆ ಕಚೇರಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 9:04 IST
Last Updated 24 ಮಾರ್ಚ್ 2018, 9:04 IST
ನಗರಸಭೆಯ ನೂತನ ಕಾರ್ಯಾಲಯದ ನೀಲನಕ್ಷೆ
ನಗರಸಭೆಯ ನೂತನ ಕಾರ್ಯಾಲಯದ ನೀಲನಕ್ಷೆ   

ದೊಡ್ಡಬಳ್ಳಾಪುರ: ನಗರಸಭೆ ಕಾರ್ಯಾಲಯದ ಆವರಣದಲ್ಲಿ ₹4.98 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗುವ ನಗರಸಭೆಯ ನೂತನ ಕಾರ್ಯಾಲಯ ಕಟ್ಟಡಕ್ಕೆ ನಗರಸಭೆ ಅಧ್ಯಕ್ಷ ಟಿ.ಎನ್.ಪ್ರಭುದೇವ್ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.

ಅವರು ಮಾತನಾಡಿ, ಈ ನಿಟ್ಟಿನಲ್ಲಿ ಸುಸಜ್ಜಿತ ನಗರಸಭೆ ಕಾರ್ಯಾಲಯ ₹4.98 ಕೋಟಿ ವೆಚ್ಚದಲ್ಲಿ ನಗರಸಭೆ ಹಾಗೂ 14ನೇ ಹಣಕಾಸು ಯೋಜನೆ ಅನುದಾನದಿಂದ ಸುಸಜ್ಜಿತ ಕಾರ್ಯಾಲಯ ನಿರ್ಮಾಣವಾಗಲಿದೆ. ಜನರಿಗೆ ಒಂದೇ ಸೂರಿನಡಿ ಎಲ್ಲ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಗುಣಮಟ್ಟದ ಕಾಮಗಾರಿಗಳನ್ನು ಗುತ್ತಿಗೆದಾರರು ಮುಗಿಸಿಕೊಡಲು ಸೂಚಿಸಿದರು. ಯೋಜನೆಗೆ ಸಹಕರಿಸಿದ ಶಾಸಕ ಟಿ.ವೆಂಕಟರಮಣಯ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ADVERTISEMENT

ನಗರಸಭೆ ಕಾರ್ಯಪಾಲಕ ಎಂಜಿನಿಯರ್‌ ಶೇಕ್‌ ಫಿರೋಜ್ ಮಾತನಾಡಿ, ನೂತನ ಕಾರ್ಯಾಲಯ ಕಟ್ಟಡಕ್ಕೆ  ₹4.98 ಕೋಟಿ ಅನು
ಮೋದಿತ ಮೊತ್ತವಾಗಿದ್ದು, ₹4.15 ಕೋಟಿ ಮೊತ್ತ ಟೆಂಡರ್‌ಗೆ ಇಡಲಾಗಿದೆ. ಎಸ್.ಎಫ್.ಸಿ. ಕಚೇರಿ ಕಟ್ಟಡ ನಿರ್ಮಾಣದ ಅನುದಾನ ₹2 ಕೋಟಿ, ಎಸ್‌ಎಫ್‌ಸಿ 2014-15ನೇ ಸಾಲಿನ ಅನುದಾನ– ₹90 ಲಕ್ಷ ಹಾಗೂ ನಗರಸಭೆಯ ಅನುದಾನ– ₹2.08 ಕೋಟಿಗಳಾಗಿವೆ. ಕಟ್ಟಡದಲ್ಲಿ ಒಟ್ಟು 3 ಮಹಡಿಗಳಿದ್ದು, ನೆಲಮಹಡಿಯಲ್ಲಿ ಪಾರ್ಕಿಂಗ್ ಮತ್ತು ಉಗ್ರಾಣ ಕೊಠಡಿಗಳು, 1ನೇ ಮಹಡಿಯಲ್ಲಿ ಅಧ್ಯಕ್ಷರು, ಪೌರಾಯುಕ್ತರು, ಆಡಳಿತ ವಿಭಾಗ, ಕಂದಾಯ ವಿಭಾಗ, ನೈರ್ಮಲ್ಯ ವಿಭಾಗಗಳು ಹಾಗೂ 2ನೇ ಮಹಡಿಯಲ್ಲಿ ಕೌನ್ಸಿಲ್ ಸಭಾಂಗಣ, ತಾಂತ್ರಿಕ ಶಾಖೆ ಮತ್ತು ದಾಖಲೆ ಕೊಠಡಿಗಳು ನಿರ್ಮಾಣವಾಗಲಿವೆ ಎಂದು ತಿಳಿಸಿದರು.

ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮೀನಟರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎಸ್.ಶಿವಶಂಕರ್, ಪೌರಾಯುಕ್ತ ಆರ್.ಮಂಜುನಾಥ್, ಸಹಾಯಕ ಎಂಜಿನಿಯರ್‌ ಎಂ.ಎಸ್.ರಘುನಾಥ್ ಹಾಗೂ ನಗರಸಭೆ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.