ADVERTISEMENT

ಕೆಸ್ತೂರು ಸಹಕಾರ ಸಂಘ: ಅಧಿಕ ರೈತರ ಸಾಲಮನ್ನಾ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 14:09 IST
Last Updated 2 ಸೆಪ್ಟೆಂಬರ್ 2018, 14:09 IST
ಕೆಸ್ತೂರು ವಿಎಸ್ಎಸ್ಎನ್ ಸರ್ವ ಸದಸ್ಯ ಸಭೆಯಲ್ಲಿ ಸಂಘದ ಅಧ್ಯಕ್ಷ ಕೆ.ಬಿ.ಬಚ್ಚೇಗೌಡ ಮಾತನಾಡಿದರು
ಕೆಸ್ತೂರು ವಿಎಸ್ಎಸ್ಎನ್ ಸರ್ವ ಸದಸ್ಯ ಸಭೆಯಲ್ಲಿ ಸಂಘದ ಅಧ್ಯಕ್ಷ ಕೆ.ಬಿ.ಬಚ್ಚೇಗೌಡ ಮಾತನಾಡಿದರು   

ದೊಡ್ಡಬಳ್ಳಾಪುರ: ‘ಹೆಚ್ಚು ಮಂದಿ ರೈತರ ಸಾಲಮನ್ನಾ ನಮ್ಮ ಸಂಘದಲ್ಲಿ ಆಗಿದೆ’ ಎಂದು ಸಂಘದ ಅಧ್ಯಕ್ಷ ಕೆ.ಬಿ. ಬಚ್ಚೇಗೌಡ ಹೇಳಿದರು.

ತಾಲ್ಲೂಕಿನ ಕೆಸ್ತೂರು ವ್ಯವಸಾಯ ಸೇವಾ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ 539 ಜನ ರೈತರ ₹ 2.35 ಕೋಟಿ ಬೆಳೆ ಸಾಲಮನ್ನಾ, 2018ರಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿ 277ಜನ ರೈತರ ₹ 1.35 ಕೋಟಿ ಬೆಳೆ ಸಾಲಮನ್ನಾ ಆಗಿದೆ ಎಂದರು.

ಸಂಘ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ, ರೈತರಿಗೆ ಬೆಳೆಸಾಲ, ನಿಶ್ಚಿತ ಠೇವಣಿ ಸಂಗ್ರಹಿಸಲಾಗಿದೆ. ಸಂಘ 2016-17ನೇ ಸಾಲಿಗೆ ₹22 ಲಕ್ಷ, 2017-18ನೇ ಸಾಲಿಗೆ ₹ 4.46 ಲಾಭ ಗಳಿಸಿದೆ. ರೈತರಿಗೆ ಸಕಾಲದಲ್ಲಿ ಬೆಳೆ ಸಾಲ ನೀಡಲು ಸಂಘ ರೈತರಿಗೆ ಸ್ಪಂದಿಸುತ್ತಿದೆ. ಸಂಘದ ವತಿಯಿಂದ ರೈತರಿಗೆ ಅಗತ್ಯ ಸೇವೆ ನೀಡಲು ಶ್ರಮಿಸಲಿದೆ ಎಂದು ಹೇಳಿದರು.

ADVERTISEMENT

ಸಭೆಯಲ್ಲಿ ಟಿಎಪಿಎಂಸಿಎಸ್ ಅಧ್ಯಕ್ಷ ಬಿ.ಅಶ್ವತ್ಥನಾರಾಯಣ, ನಿರ್ದೇಶಕರಾದ ಎನ್. ಮುನಿಯಪ್ಪ, ಕೆ.ಬಿ. ಶಿವಾನಂದ, ಕೆ.ಆರ್. ಚನ್ನೇಗೌಡ, ಎಚ್.ಎಚ್. ರಾಮೂರ್ತಿ, ಎಚ್.ಎಂ. ಬಸವರಾಜು, ಎಚ್. ಹನುಮಂತರಾಯಪ್ಪ, ಕೆ.ಎಚ್. ಜಯಲಕ್ಷ್ಮಮ್ಮ, ಸುಶೀಲಮ್ಮ, ಜಿ.ಕೆಂಪಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.