ಆನೇಕಲ್: ವಿದ್ಯಾರ್ಥಿಗಳಲ್ಲಿ ಛಲವಿದ್ದರೆ ಎನ್ನನ್ನಾದ್ದರೂ ಸಾಧಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಲು ಸತತ ಅಭ್ಯಾಸ ಮತ್ತು ತಾಳ್ಮೆ ಅವಶ್ಯಕ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಎಂ.ಕೆ.ಶ್ರೀವಸ್ತವ ಹೇಳಿದರು.
ತಾಲ್ಲೂಕಿನ ಎಲೆಕ್ಟ್ರಾನಿಕ್‌ಸಿಟಿಯ ಐಎಸ್‌ಬಿಆರ್ ಪದವಿ ಕಾಲೇಜಿನಲ್ಲಿ ಪದವಿ ತರಗತಿ ಪ್ರಾರಂಭೋತ್ಸವ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಪರೀಕ್ಷೆಗಳಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಒಂದೇ ದಿನದಲ್ಲಿ ಯಾವುದೇ ಪವಾಡ ನಡೆಯುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ನಿರಂತರ ಪ್ರಯತ್ನ ನಡೆಸಬೇಕು ಎಂದರು.
ಬೆಂಗಳೂರು ಐಐಎಂನ ನಿವೃತ್ತ ಡೀನ್ ಪ್ರೊ.ರಾಹುಲ್ ದೇ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ನಡೆಸಲು ಕ್ರಿಯಾಶೀಲತೆ ಅವಶ್ಯಕತೆ ಇದೆ. ಕೃತಕ ಬುದ್ಧಿಮತ್ತೆ, ಮೆಷಿನ್ ಲರ್ನಿಂಗ್, ಅಲಾಗಾರಿಥಮ್‌ನಂತಹ ಹೊಸ ಹೊಸ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಅಧ್ಯಯನ ನಡೆಸಬೇಕು. ಶೈಕ್ಷಣಿಕವಾಗಿ ಎಲ್ಲಾ ವಿಷಯಗಳಿಗೂ ಕೃತಕ ಬುದ್ಧಿಮತ್ತೆ ಅವಶ್ಯಕತೆ ಇದೆ. ಕಾನೂನು, ಎಂಜಿನಿಯರಿಂಗ್ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ಹೊಸ ತಂತ್ರಾಂಶಗಳ ಅವಶ್ಯಕತೆ ದಿನೇ ದಿನೇ ಹೆಚ್ಚಾಗುತ್ತಿದೆ. ಬಳಕೆದಾರರು ತಂತ್ರಜ್ಞಾನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಟರ್ನ್‌ಸ್ಟೋನ್ ಹಾಸ್ಪಿಟಾಲಿಟಿ ಗ್ರೂಪ್‌ನ ಸಿಇಓ ಮೋಹನ್ ಕುಮಾರ್, ಸುಪ್ರೀಂ ಕೋರ್ಟ್ ವಕೀಲ ಶಿಶಿರ್ ರಾಜ್, ಅಸೆನ್‌ಚರ್‌ನ ಉಪಾಧ್ಯಕ್ಷ ರಾಮಕೃಷ್ಣ ಅಯ್ಯಪ್ಪನ್ ಐಎಸ್‌ಬಿಆರ್ ಸಂಸ್ಥೆಯ ಅಧ್ಯಕ್ಷ ಮನೀಷ್ ಕೊತಾರಿ, ಆಡಳಿತ ಮಂಡಳಿಯ ಬಲವಂತ್ ಕಳಸ್ಕರ್, ತಪನ್ ನಾಯಕ್, ಕವಿತಾ ಮಧುಸೂದನ್, ನೀಲಾ ಚೈಟಾಯ್, ಲಕ್ಷ್ಮೀನಾರಾಯಣ್, ನರಸಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.