
ಆನೇಕಲ್: ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದಿಂದ ಅಲಯನ್ಸ್ ವಿಶ್ವವಿದ್ಯಾಲಯದದಲ್ಲಿ ಗ್ರಂಥಾಲಯದಲ್ಲಿ ಕೃತಕ ಬುದ್ದಿಮತ್ತೆ ಪ್ರಭಾವ ಕುರಿತು ಕಾರ್ಯಾಗಾರ ನಡೆಯಿತು.
ಕಾರ್ಯಾಗಾರದಲ್ಲಿ ಸಾರ್ವಜನಿಕರ ಗ್ರಂಥಾಲಯ, ಕಾರ್ಪೋರೇಟ್ ಗ್ರಂಥಾಲಯ ಸೇರಿದಂತೆ 43 ಸಂಸ್ಥೆಗಳ 55 ಗ್ರಂಥಪಾಲಕರು ಮತ್ತು ಮಾಹಿತಿ ತಂತ್ರಜ್ಞರು ಪಾಲ್ಗೊಂಡಿದ್ದರು.
ಟಿಸಿಎಸ್ ಮಾಹಿತಿ ಸಂಪನ್ಮೂಲ ಕೇಂದ್ರದ ಪ್ರಾದೇಶಿಕ ಮುಖ್ಯಸ್ಥ ಡಾ.ನಾಗಪ್ಪ ಬಕ್ಕಣ್ಣ, ಗ್ರಂಥಾಲಯದಲ್ಲಿ ಕೃತಕ ಬುದ್ಧಿಮತ್ತೆಯು ಪ್ರಮುಖ ಪಾತ್ರ ವಹಿಸುತ್ತದೆ. ಪುಸ್ತಕಗಳ ಲಭ್ಯತೆ, ಸ್ವಯಂ ಚಾಲಿತ ವ್ಯವಸ್ಥೆ, ಡಿಜಿಟಲ್ ಪರಿವರ್ತನೆಯಿಂದ ಓದುಗರಿಗೆ ಹೊಸ ಅನುಭವ ನೀಡುತ್ತದೆ. ಸಾಂಪ್ರದಾಯಿಕ ಓದಿಗೆ ಪರ್ಯಾಯವಾಗಿ ಡಿಜಿಟಲ್ ಪುಸ್ತಕಗಳು ಯುವಕರನ್ನು ಹೆಚ್ಚು ಸೆಳೆಯುತ್ತದೆ ಎಂದರು.
ವಿಶ್ವವಿದ್ಯಾಲಯದ ಕಾನೂನು ಕಾಲೇಜಿನ ಡೀನ್ ಡಾ.ವಿ.ಶ್ಯಾಮ್ ಕಿಶೋರ್, ಗ್ರಂಥಾಲಯ ಸೇವೆ ಆಧುನೀಕರಣಗೊಳ್ಳುವುದರಿಂದ ವಿದ್ಯಾರ್ಥಿಗಳು ಕುತೂಹಲ ಹೆಚ್ಚಾಗುತ್ತದೆ. ಓದುವ ಮನಸ್ಸು ಹೆಚ್ಚಾಗುತ್ತದೆ. ಕೃತಕ ಬುದ್ಧಿಮತ್ತೆ ಅಳವಡಿಕೆಯಿಂದ ಓದುಗರಿಗೆ ಮತ್ತು ಗ್ರಂಥಾಲಯದ ನಿರ್ವಾಹಕರಿಗೆ ಅನುಕೂಲವಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.