
ಆನೇಕಲ್: ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮ ಪಂಚಾಯಿತಿಯಿಂದ ಶುಕ್ರವಾರ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಚಿಣ್ಣರು ತಮ್ಮ ಶಾಲೆ ಹಾಗೂ ಸುತ್ತಮುತ್ತಲಿನ ಸಮಸ್ಯೆಗಳನ್ನು ತೆರದಿಟ್ಟರು.
ಶಾಲೆಯಲ್ಲಿ ಶೌಚಾಲಯ ಸಮಸ್ಯೆ, ಮೈದಾನದಲ್ಲಿ ಸೂಕ್ತ ಭದ್ರತೆ ಇಲ್ಲ, ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ, ಕಸದ ಸಮಸ್ಯೆ, ಚರಂಡಿ ಸಮಸ್ಯೆ, ರಸ್ತೆ ಗುಂಡಿ ಸೇರಿದಂತೆ ಸಮಸ್ಯೆಗಳ ಮಳೆ ಗೈದರು. ಕಾರ್ಡ್ ಬೋರ್ಡ್‌ಶೀಟ್‌ನಲ್ಲಿ ವಿದ್ಯಾರ್ಥಿಗಳು ಸಮಸ್ಯೆಗಳ ಭಾವಚಿತ್ರ ಪ್ರದರ್ಶಿಸಿ ಗಮನ ಸೆಳೆದರು. ವಿವಿಧ ಶಾಲೆಗಳ 250 ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮುತ್ತಾನಲ್ಲೂರು ಸರ್ಕಾರಿ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಚಿಂತನಾ ಮಾತನಾಡಿ, ಮುತ್ತನಲ್ಲೂರು ಸುಸಜ್ಜಿತ ಮೈದಾನದ ಸೌಲಭ್ಯವಿಲ್ಲ. ಗ್ರಾಮ ಸಭೆ ನಡೆಯುತ್ತಿರುವ ಜಾಗವೇ ಸರ್ಕಾರಿ ಶಾಲೆಯದ್ದಾಗಿದೆ. ಹಾಗಾಗಿ ಸಾಲ ಮೈದಾನಕ್ಕೆ ತಡೆಗೋಡೆ ಹಾಕಿ ಕೊಡಬೇಕು ಎಂದು ಒತ್ತಾಯಿಸಿದರು.
ಅದೇ ಶಾಲೆಯ ವಿದ್ಯಾರ್ಥಿನಿ ನಂದಿತಾ, ಸರ್ಕಾರಿ ಶಾಲೆಯಲ್ಲಿ ಸುಸಜಿತ ಕ್ರೀಡಾ ಉಪಕರಣಗಳಿಲ್ಲ ಡ್ರಮ್ ಸೆಟ್ ಇಲ್ಲ. ಇದರಿಂದ ವಿದ್ಯಾರ್ಥಿಗಳಿಗ ಸಮಸ್ಯೆಯಾಗುತ್ತಿದೆ ಎಂದರು.
ಗೋಪಸಂದ್ರದ ವಿದ್ಯಾರ್ಥಿ ಕಾರ್ತಿಕ್, ಗ್ರಾಮದಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ ಎಂದರು. ವಿದ್ಯಾರ್ಥಿ ತಕ್ಷ, ಶಾಲೆಯ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ ಇಲ್ಲ. 160 ಮಂದಿ ವಿದ್ಯಾರ್ಥಿಗಳಿರುವುದರಿಂದ ಸುಸಜ್ಜಿತ ಶೌಚಾಲಯದ ಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿನಿ ಬನಶಂಕರಿ, ಅನ್ನಪೂರ್ಣ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಬೀದಿ ನಾಯಿಗಳ ಕಡಿತದಿಂದಾಗಿ ಒಂದು ವಾರ ಆರೋಗ್ಯ ಸಮಸ್ಯೆ ಉಂಟಾಗಿತ್ತು. ಹಾಗಾಗಿ ಬೀದಿನಾಯಿಗಳ ಸಮಸ್ಯೆ ಪರಿಹರಿಸಲು ಪಂಚಾಯಿತಿ ಅವಶ್ಯಕತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಾಮಾನ್ಯವಾಗಿ ಗ್ರಾಮ ಸಭೆಗಳು ಅಂದರೆ ಕಚ್ಚಾಟವಾಗಿರುತ್ತದೆ. ಆದರೆ ವಿದ್ಯಾರ್ಥಿಗಳು ಕ್ರಿಯಾಶೀಲ ವರದಿಯ ಮೂಲಕ ಗ್ರಾಮಸಭೆಯ ಬೆಳಕು ಚೆಲ್ಲಿರುವುದು ವಿಶೇಷವಾಗಿದೆ. ವಿದ್ಯಾರ್ಥಿಗಳ ಸಮಸ್ಯೆಯ ಬೆಳಕು ಚೆಲ್ಲಲು ಗ್ರಾಮ ಸಭೆಗಳು ಉಪಯುಕ್ತವಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸಿಂಗೆನಅಗ್ರಹಾರ ಗೌರೀಶ್ ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಕಾಂತರಾಜು, ಉಪಾಧ್ಯಕ್ಷೆ ಮಂಜುಳಾ ರಮೇಶ್ ರೆಡ್ಡಿ, ಪಿಡಿಒ ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯರಾದ ಜಯರಾಮ್ ಸರ್ಜಾ, ತೇಜಸ್ವಿನಿ, ಸುಮಂಗಲ, ಶುಭಾ ಶ್ರೀಧರ್, ರಾಣಿ ನಾಗರಾಜು, ಸುವರ್ಣ ದಶರತ್, ಉಮೇಶ್, ರವೀಂದ್ರ, ಮಂತ್ರ ಪ್ರತಿಷ್ಠಾನದ ಮೌನೇಶ್, ಖುಷ್ಬು, ಚಿನ್ಮಯ ಸೇವಾ ಸಂಸ್ಥೆಯ ಅಧ್ಯಕ್ಷ ಚಿನ್ನಪ್ಪ ಚಿಕ್ಕಹಾಗಡೆ, ಇನ್ವಾಲ್ವ್ ಸಂಸ್ಥೆಯ ವಾಣಿಶ್ರೀ ಇದ್ದರು.
ವಿದ್ಯಾರ್ಥಿಗಳ ಸಮಸ್ಯೆಯನ್ನು ಪರಿಹರಿಸಲು ಆದ್ಯತೆ ನೀಡಲಾಗುವುದು. ರಸ್ತೆ ಅಭಿವೃದ್ಧಿ ಮತ್ತು ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿಸಲು ಶೀಘ್ರ ಕ್ರಮವಹಿಸಲಾಗುವುದುನಾಗರತ್ನ ಕಾಂತರಾಜ ಅಧ್ಯಕ್ಷೆ ಗ್ರಾಮ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.