ADVERTISEMENT

ಆನೇಕಲ್: ಹುಲಿಮಂಗಲದ ವಸತಿ ಸಮುಚ್ಚಯದಲ್ಲಿ ಕಳವು ಪ್ರಕರಣ– ಇಬ್ಬರ ಬಂಧನ

1.14 ಕೋಟಿ ನಗದು, 16 ಗ್ರಾಂ ಚಿನ್ನದ ಸರ ಪೊಲೀಸರ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 2:46 IST
Last Updated 4 ಡಿಸೆಂಬರ್ 2025, 2:46 IST
ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ಪೊಲೀಸರು ಇಬ್ಬರು ಆರೋಪಿಗಳಿಂದ ವಶಕ್ಕೆ ಪಡೆಯಲಾದ ನಗದು ಮತ್ತು ಚಿನ್ನ
ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ಪೊಲೀಸರು ಇಬ್ಬರು ಆರೋಪಿಗಳಿಂದ ವಶಕ್ಕೆ ಪಡೆಯಲಾದ ನಗದು ಮತ್ತು ಚಿನ್ನ   

ಆನೇಕಲ್: ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಹುಲಿಮಂಗಲದ ವಸತಿ ಸಮುಚ್ಚಯದಲ್ಲಿ ಇತ್ತೀಚೆಗೆ ನಡೆದಿದ್ದ ಕಳ್ಳತನ ಪ್ರಕರಣ ಭೇದಿಸಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. 

ಬಂಧಿತರಿಂದ ₹1.14 ಕೋಟಿ ನಗದು ಹಾಗೂ 16 ಗ್ರಾಂ ಚಿನ್ನದ ಸರ ವಶಕ್ಕೆ ಪಡೆಯಲಾಗಿದೆ ಎಂದು ಹೆಬ್ಬಗೋಡಿ ಪೊಲೀಸರು ಬುಧವಾರ ತಿಳಿಸಿದ್ದಾರೆ. 

ಸುಂಕದಕಟ್ಟೆ ನಿವಾಸಿ ಶ್ರೀನಿವಾಸ್ ಮೂರ್ತಿ (39) ಮತ್ತು ದಾಸನಪುರ ಚಿಕ್ಕ ಗೊಲ್ಲರಹಟ್ಟಿಯ ಅರುಣ್ ಕುಮಾರ್ (39) ಬಂಧಿತರು. 

ADVERTISEMENT

ನವೆಂಬರ್ 8ರಂದು ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಹುಲಿಮಂಗಲ ಗ್ರಾಮದ ಎಲಿಗನ್ಸ್ ಅಪಾರ್ಟ್‌ಮೆಂಟ್‌ನ ಸುನೀಲ್‌ ಅವರು ತಮ್ಮ ಮನೆ ಬೀಗ ಹಾಕಿಕೊಂಡು ಕುಟುಂಬ ಸಮೇತರಾಗಿ ಕೋಲಾರಕ್ಕೆ ಹೋಗಿದ್ದರು. ಈ ವೇಳೆ ಮನೆಗೆ ನುಗ್ಗಿದ್ದ ಕಳ್ಳರು ನಗದು ಮತ್ತು ಚಿನ್ನ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ನವೆಂಬರ್ 9ರಂದು ಪ್ರಕರಣ ದಾಖಲಾಗಿತ್ತು. 

ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ನಾರಾಯಣ್, ಎಸಿಪಿ ಸತೀಶ್ ಅವರ ಮಾರ್ಗದರ್ಶನದಲ್ಲಿ ಹೆಬ್ಬಗೋಡಿ ಪೊಲೀಸ್ ಇನ್‌ಸ್ಪೆಕ್ಟರ್ ಜಿ.ಸೋಮಶೇಖರ್, ಸಬ್ ಇನ್‌ಸ್ಪೆಕ್ಟರ್‌ ಅಯ್ಯಪ್ಪ, ಸಿಬ್ಬಂದಿ ಮಹಾಂತೇಶ್ ಗೌಡ, ಸಂತೋಷ್, ಪ್ರವೀಣ್, ವೇಣುಗೋಪಾಲ್, ಅಶೋಕ್, ನಾಗೇಶ್, ಆನಂದ್, ಮುರುಳಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.