ADVERTISEMENT

ಕೆಂಗೇಗೌಡರ ಪ್ರತಿಮೆ ಅನಾವರಣದಲ್ಲಿ ಪಾಲ್ಗೊಳ್ಳಿ: ಕೆ.ಸಿ. ವೆಂಕಟೇಗೌಡ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 7:24 IST
Last Updated 9 ನವೆಂಬರ್ 2022, 7:24 IST
ದೇವನಹಳ್ಳಿಯಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದಿಂದ ಕೆಂಪೇಗೌಡರ ಪ್ರತಿಮೆಯ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು
ದೇವನಹಳ್ಳಿಯಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದಿಂದ ಕೆಂಪೇಗೌಡರ ಪ್ರತಿಮೆಯ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು   

ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡ ಪ್ರಗತಿಯ ಪ್ರತಿಮೆಯು ನ. 11ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆ ಆಗಲಿದ್ದು, ಕಾರ್ಯಕ್ರಮದಲ್ಲಿ ತಾಲ್ಲೂಕಿನಾದ್ಯಂತ ಎಲ್ಲಾ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಸಿ. ವೆಂಕಟೇಗೌಡ ಮನವಿ ಮಾಡಿದರು.

ಪಟ್ಟಣದ ತಾಲ್ಲೂಕು ಒಕ್ಕಲಿಗರ ಸಂಘದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರು ಮಹಾನಗರ ನಿರ್ಮಾಣ ಮಾಡಿ, ನಮ್ಮ ಹಿರಿಯರು ಸೇರಿದಂತೆ ಜನರ ಭವಿಷ್ಯದ ಬದುಕು ನಿರ್ಮಾಣ ಮಾಡಿಕೊಡಲು ಅನುವು ಮಾಡಿಕೊಟ್ಟ ಶ್ರೇಷ್ಠ ನಾಯಕರ ಉತ್ಸವದಲ್ಲಿ ಎಲ್ಲರೂ ಭಾಗಿಯಾಗೋಣ’ ಎಂದು ತಿಳಿಸಿದರು.

‘ಐದು ಶತಮಾನಗಳ ಹಿಂದೆಯೇ ಎಲ್ಲಾ ಸಮುದಾಯದವರು ವ್ಯಾಪಾರ ವಹಿವಾಟು ಮಾಡಲು ಅನೇಕ ಪೇಟೆಗಳು, ಕೆರೆ–ಕಟ್ಟೆಗಳನ್ನು ನಿರ್ಮಿಸಿದರು. ಸುಭದ್ರ ನಗರದ ಕಲ್ಪನೆ ನೀಡಿದ ಮಹಾಪುರುಷರಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಕ್ಷಾತೀತ, ಜಾತ್ಯತೀತವಾಗಿ ಭಾಗವಹಿಸೋಣ’ ಎಂದು ಮುಖಂಡ ಜೊನ್ನಹಳ್ಳಿ ಮುನಿರಾಜು ತಿಳಿಸಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಎ.ವಿ.ಎನ್‌. ನಾರಾಯಣಸ್ವಾಮಿ, ನರಗೇನಹಳ್ಳಿ ಶ್ರೀನಿವಾಸ್, ಕೆ.ಸಿ. ಮಂಜುನಾಥ್, ಎಸ್.ಎಲ್.ಎನ್. ಮುನಿರಾಜು, ಈರಣ್ಣ ಗೌಡ, ಬಿ.ಎಂ. ಬೈರೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.